ಕುಮಟಾ: ತಾಲೂಕಿನ ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಧ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು 31 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಶೇಕಡಾ 96.77 ಫಲಿತಾಂಶವಾದರೆ ಗುಣಾತ್ಮಕ ಫಲಿತಾಂಶ 86.33 ಬಂದು ಎ ಗ್ರೇಡ್ ಬಂದಿದೆ.
ಡಿಸ್ಟಿಂಕ್ಷನಲ್ಲಿ 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 14 ವಿದ್ಯಾರ್ಥಿಗಳು ದ್ವೀತಿಯ ದರ್ಜೆಯಲ್ಲಿ 04 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕುಮಾರಿ ನೇಹಾ ಬಾಲಚಂದ್ರ ಭಟ್, 625ಕ್ಕೆ 604 ಅಂಕ 96.64% ದೊಂದಿಗೆ ಪ್ರಥಮ ಸ್ಥಾನ, ಪ್ರಣತಿ ಅನಂತರಾಯ ಪೈ 625ಕ್ಕೆ 587 ಅಂಕ 93.92% ದೊಂದಿಗೆ ದ್ವಿತೀಯ ಸ್ಥಾನ, ನಿತೀನ ಮಾರುತಿ ಆಚಾರಿ, 625ಕ್ಕೆ 586 ಅಂಕ 93.76%ದೊಂದಿಗೆ ಚತುರ್ಥ ಸ್ಥಾನ ದಿವ್ಯಾ ರಾಮ ಮರಾಠಿ 625ಕ್ಕೆ 571 ಅಂಕ ದೊಂದಿಗೆ 91.36 % ಪಡೆದಿದ್ದಾಳೆ. ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪಾಸಾದ ವಿದ್ಯಾರ್ಥಿಗಳನ್ನು ಕೆನರಾ ಎಜ್ಯುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ವಸುದೇವ ಪ್ರಭು, ಹಾಗೂ ಸರ್ವ ಸದಸ್ಯರು, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಪಾಲಕವೃಂದದವರು ಅಭಿನಂಧಿಸಿದ್ದಾರೆ.