ಕುಮಟಾ: ಮತಕಟ್ಟೆಗೆ ಎಲ್ಲರೂ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿರುವ ದೃಶ್ಯಕಂಡು ಬಂತು. ಇನ್ನು ತಾಲೂಕಿನ ಹೆಗಡೆಯ ಶಿವಪುರ ವಾರ್ಡ ಮಣಿಕಂಠ ೧೩ ವರ್ಷದ ಬಾಲಕನು ತನ್ನ ತಾಯಿ ಅನಾರೋಗ್ಯದಿಂದ ಕಾಲಿನ ಸ್ವಾಧಿನ ಕಳೆದುಕೊಂಡಿದ್ದು, ಮತದಾನ ಕೇಂದ್ರಕ್ಕೆ ತಮ್ಮ ಮನೆಯಿಂದ ೨ ಕಿ.ಮೀ ದೂರದ ವರೆಗೆ ವಿಲ್‌ಚಾರ್‌ನಲ್ಲಿ ತಳ್ಳಿಕೊಂಡು, ಹೆಗಡೆ ಸರಕಾರಿ ಹೆಣ್ಣುಮಕ್ಕಳ ಶಾಲೆಯ ತನಕ ಬಂದು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.