ಕುಮಟಾ: ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ತೀವೃ ಜಿದ್ದಾಜಿದ್ದಿನ ಕ್ಷೇತ್ರವಾದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಗೆ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ೬೭೩ ಮತಗಳ ಅಂತರದಲ್ಲಿ ಗೆಲುವಿನ ನಗೆಬಿರಿದ್ದಾರೆ. ಮೊದಲಿನಿಂದಲೂ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಹಾಗೂ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ನಡುವೆ ನೇರವಾದ ಸ್ವರ್ದೆ ನಡೆದಿತ್ತು.
ಒಮ್ಮೆ ಸೂರಜ್ ನಾಯ್ಕ ಸೋನಿ ಮತ್ತೊಮ್ಮೆ ದಿನಕರ ಶೆಟ್ಟಿ ಮುನ್ನಡೆ ಸಾಧಿಸಿದ್ದರು. ೧೭ ಸುತ್ತಿನ ವರೆಗೆಗೂ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಗೆ ೬೭೩ ಮತಗಳ ಅಂತರದಿಂದ ದಿನಕರ ಶೆಟ್ಟಿ ಜಯಸಾಧಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕರಾದ ದಿನಕರ ಶೆಟ್ಟಿ ನಾನು ೨ ನೇ ಭಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸುತ್ತಿದ್ದೇನೆ. ಮೊದಲು ಜೆಡಿಎಸ್‌ನಿಂದ ಗೆದ್ದಿದ್ದೇನೆ ಒಟ್ಟಾರೆ ನಾನು ಮೂರು ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಗೆಲುವಿಗೆ ಪಕ್ಷದ ಮುಖಂಡರು ಕಾರ್ಯಕರ್ತರು ಬಿಜೆಪಿಯ ರಾಜ್ಯಮಟ್ಟದ ನಾಯಕರು ಕಾರಣರಾಗಿದ್ದಾರೆ ಎಂದರು.