ಕುಮಟಾ: ವಿಧಾನಸಭಾ ಕ್ಷೇತ್ರದ ೧೫೧ ಮತಗಟ್ಟೆಯಲ್ಲಿ ಶಾಂತಿಯುತವಾದ ಮತದಾನ ನಡೆಯಿತು. ಹೊಸ ಮತದರರು ಅಂವೀಕಲರು, ವಯೋವೃದ್ದರೂ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಬೆಳಿಗ್ಗೆ ೭ ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ ೬ ಗಂಟೆಯ ವರೆಗೆ ನಡೆಯಿತು. ಕೆಲವು ಮತಗಟ್ಟೆಯಲ್ಲಿ ಮುಂಜಾನೆಯಿಂದ ಮತದಾನ ಮಾಡಿದ್ರೆ ಇನ್ನು ಕೆಲವು ಮತಗಟ್ಟೆಯಲ್ಲಿ ಮದ್ಯಾಹ್ನದ ವೇಳೆಯಲ್ಲಿ ಹಕ್ಕು ಚಲಾಯಿಸಿದ ದೃಶ್ಯ ಕಂಡುಬಂತು. ಇನ್ನು ೮೦ ವರ್ಷ ಮೇಲ್ಪಟ್ಟ ವಯೋವೃದ್ದರಿಗೆ ತಮ್ಮ ತಮ್ಮ ಮನೆಯಲ್ಲಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೂ ಕೂಡಾ ವಯೋವೃದ್ದರು, ಮತಗಟ್ಟೆಗೆ ಆಗಮಿಸಿ ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮೇ ೧೩ ರಂದು ಪಲಿತಾಂಶ ಪ್ರಕಟವಾಗಲಿದ್ದು ಯಾರು ಕುಮಟಾ - ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.