ಕುಮಟಾ: ಕುಮಟಾದ ಕತಗಾಲನ ಅಳಕೋಡ ಗ್ರಾ.ಪಂ ವ್ಯಾಪ್ತಿಯಲ್ಲಿ ತೆರೆಯಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಹಾಗೂ ಮಾಜಿ ಜಿ.ಪಂ ಸದಸ್ಯರಾದ ವೀಣಾ ಸೂರಜ್ ನಾಯ್ಕ ಸೋನಿ ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆಯಿಂದ ವಿವಿಧ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮತಗಟ್ಟೆಗೆ ಆಗಮಿಸಿ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡಿದರು. ನಾನು ಕ್ಷೇತ್ರದ ಎಲ್ಲಾ ಬೂತ್‌ಗಳಿಗೂ ಭೇಟಿ ನೀಡಿದ್ದೇನೆ ಉತ್ತಮವಾದ ವಾತವರಣ ಇದೆ, ಇದನ್ನು ಗಮನಿಸಿದಾಗ ಜನರು ಬದಲಾವಣೆ ಬಯಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜನರು ಬದಲಾವಣೆಯ ಜೋತೆ ಉತ್ತಮವಾದ ಆಡಳಿತ ನಿರೀಕ್ಷೆ ಮಾಡಿದ್ದಾರೆ. ಹಾಗಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಬದಲಾವಣೆ ನಿರೀಕ್ಷೆಯಿದೆ, ಎಂದು ಹೇಳಿದರು.