ರಾಷ್ಟ್ರ : ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿ ವಾಪಾಸ್ ಪಡೆಯಲು ರಿಸರ್ವ ಬ್ಯಾಂಕ್ ಆದೇಶಿದೆ. 2016ರ ಡಿಸೆಂಬರ್‌ನಲ್ಲಿ 2ಸಾವಿರ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬಂದಿತ್ತು.
ಇದೀಗ ಚಲಾವಣೆ ನಿಲ್ಲಿಸಿ ವಾಪಾಸ್ ಪಡೆಯುವುದಾಗಿ ಆರ್.ಬಿ.ಐ ತಿಳಿಸಿದೆ. ಆರ್.ಬಿ.ಐ 2019ರಿಂದ 2000 ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಬ್ಯಾಂಕುಗಳಲ್ಲಿ 2000 ರೂ ನೋಟು ಬದಲಿಸಿಕೊಳ್ಳಲು ಸಪ್ಪೆಂಬರ್ 30 ರವರೆಗೆ ಅವಕಾಶವಿದ್ದು ಅಕ್ಟೋಬರ್ 1 ರಿಂದ ನೋಟು ಚಲಾವಣೆಯನ್ನು ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ರಿಸರ್ವ ಬ್ಯಾಂಕ ಹೇಳಿದೆ. ಇನ್ನು ಮುಂದೆ ಬ್ಯಾಂಕುಗಳಲ್ಲಿ ಗ್ರಾಹಕರಿಗೆ 2000 ರೂ ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕ್‌ಗಳಿಗೆ ಆರ್.ಬಿ.ಐ ಸೂಚನೆ ನೀಡಿದೆ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ನೋಟು ಬದಲಾಯಿಸಿಕೊಳ್ಳಲು, ಸಪ್ಟೆಂಬರ್ 30ರವೆಗೆ ಅವಕಾಶ ನೀಡಲಾಗಿದೆ.