ಹೊನ್ನಾವರ: ಚುನಾವಣಾಧಿಕಾರಿಗಳು ಚೆಕ್ ಪೊಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಆಟೋ ಒಂದರಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದ್ದು ಆರೋಪಿ ಹಾಗೂ ಆಟೋ ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಚಂದಾವರದ ಚೆಕ್ ಪೊಸ್ಟ್‌ನ ಬಳಿ ಬೆಳಗಿನ ಜಾವ ನಡೆದಿದೆ.
ಶಿವಮೊಗ್ಗದಿಂದ ಕುಮಟಾಕ್ಕೆ ಆಟೋದಲ್ಲಿ ಹಣ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಈ ವೇಳೆ ೯೩,೫೦,೦೦೦ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆಟೋ ರೀಕ್ಷಾದಲ್ಲಿ ಸಾಗಿಸುತ್ತಿದ್ದ ಕಾಗಲ ಗ್ರಾಮದ ರವಿ ಪಂಡಿತಗೆ ಚುನಾವಣೆಯ ಅಧಿಕಾರಿಗಳು ಹಣದ ಬಗ್ಗೆ ದಾಖಲಾತಿಗಳನ್ನು ನೀಡುವಂತೆ ಹೇಳಿದಾಗ ಹಣದ ಬಗ್ಗೆ ಯಾವುದೇ ದಾಖಲಾತಿಯನ್ನು ನೀಡಿಲ್ಲ. ಶಿವಮೊಗ್ಗದ ಮೂಲದ ಆಟೋ ಚಾಲಕನ್ನು ವಿಚಾರಿಸಿದಾಗ ಅವನು ತನ್ನ ಆಟೋದಲ್ಲಿದ್ದ ರವಿ ಪಂಡಿತಗೆ ಸೇರಿರುವುದಾಗಿ ಹೇಳಿದ್ದಾರೆ ಎನ್ನಲಾಗಿದ್ದು, ಈ ಹಣ ಕುಮಟಾ ವಿಧಾನಸಭಾ ಕ್ಷೇತ್ರದ ರಾಷ್ಟೀಯ ಪಕ್ಷದ ಅಭ್ಯರ್ಥಿ ಓರ್ವರಿಗೆ ತಲುಪಿಸಲು ಶಿವಮೊಗ್ಗದಿಂದ ಆಟೋದಲ್ಲಿ ತರಲಾಗುತ್ತಿತ್ತು ಎನ್ನಲಾಗಿದೆ.
ಈಗಾಗಲೇ ಎಲ್ಲಾ ಹಣವನ್ನು ಚುನಾವಣೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ಇನ್ನು ಆಟೋ ಚಾಲಕನನ್ನು ಹೊನ್ನಾವರ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು ವಿಚಾರಣೆ ಬಳಿಕ ಈ ಹಣ ಯಾವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ತಲುಪಿಸಲು ಸಾಗಾಟ ಮಾಡಲಾಗಿತ್ತಿತ್ತು ಎನ್ನುವುದು ಬಹಿರಂಗವಾಗಬೇಕಿದೆ.