Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ – ಶೇಕಡಾ ನೂರರಷ್ಟು ಫಲಿತಾಂಶ

ಕುಮಟಾ : ಶ್ರೀ ಜಿ. ಎನ್. ಹೆಗಡೆ ಟ್ರಸ್ಟ್ (ರಿ) ಬಗ್ಗೋಣ ರಸ್ತೆ, ಕುಮಟಾ ಇವರ ಪ್ರಾಯೋಜಕತ್ವದಲ್ಲಿ ಕುಮಟಾ ತಾಲೂಕು ಗೋರೆಯ ಆಧ್ಯಾತ್ಮಿಕ ಹಿನ್ನಲೆಯುಳ್ಳ ಪ್ರಶಾಂತ ವಾತಾವರಣದಲ್ಲಿ ಸ್ಥಾಪಿಸಿದ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇಕಡಾ ನೂರರಷ್ಟು ಫಲಿತಾಂಶ ದಾಖಲಿಸಿ ಅಮೋಘ ಸಾಧನೆ ಮಾಡಿದ್ದಾರೆ.


ವಾಣಿಜ್ಯ ವಿಭಾಗದಲ್ಲಿ – ಕುಮಾರಿ ವೈಶಾಲಿ ವೆಂಕಟರಮಣ ಭಟ್ಟ ೬೦೦ರಲ್ಲಿ – ೫೮೨ – ೯೭%, ಕುಮಾರ ಸಮರ್ಥ ಚಂದ್ರಶೇಖರ ಹೆಗಡೆ ೬೦೦ರಲ್ಲಿ – ೫೫೫ – ೯೨.೫%, ಕುಮಾರಿ ರಕ್ಷಿತಾ ರಾಮಚಂದ್ರ ಹೆಗಡೆ ೬೦೦ರಲ್ಲಿ – ೫೩೯ – ೮೯.೮% ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ – ಶ್ರೀನಿಧಿ ರಮೇಶ ಹೆಗಡೆ ೬೦೦ರಲ್ಲಿ – ೫೬೩ – ೯೩.೮%, ಧನ್ಯಾ ಮಹಾದೇವ ದೇವಾಡಿಗ ೬೦೦ರಲ್ಲಿ – ೫೪೪ -೯೦%, ರೋಹನ ಗಣಪತಿ ಗುನಗಾ ೬೦೦ರಲ್ಲಿ – ೫೨೫ -೮೭.೫% ಅಂಕಗಳನ್ನು ಪಡೆದು ಅನುಕ್ರಮವಾಗಿ ಸಂಸ್ಥೆಗೆ ಪ್ರಥಮ,ದ್ವಿತೀಯ,ತೃತೀಯ ಸ್ಥಾನವನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಡಾ, ಜಿ. ಜಿ. ಹೆಗಡೆ, ಪ್ರಾಚಾರ್ಯ ಶ್ರೀ ಡಿ. ಎನ್. ಭಟ್ಟ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಉಪನ್ಯಾಸಕ ಹಾಗೂ ಪಾಲಕ ವೃಂದದವರು ವಿದ್ಯಾರ್ಥಿಗಳ ಈ ಅಮೋಘ ಸಾಧನೆಯನ್ನು ಪ್ರಶಂಸಿ ಅಭಿನಂದಿಸಿರುತ್ತಾರೆ.