Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ನಿವೇದಿತ ಆಳ್ವಾ ನಾಮಪತ್ರ ಸಲ್ಲಿಕೆಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಶಾರದಾ ಶೆಟ್ಟಿ ಮನೆಗೆ

ಕುಮಟಾ: ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಕೆ‌ಗೆ ನಿವೇದಿತ್ ಆಳ್ವಾ ಮುಂದಾಗಿದ್ದು, ಈ ಸಂದರ್ಭದಲ್ಲಿ ಮೆರವಣಿಗೆ ನಡೆಸಿದರು. ಕೆಲವು ಕಾಂಗ್ರೆಸ್ ಕಾರ್ಯಕರ್ತರು/ ಮೆರವಣಿಗೆಗೆ ಬಂದಿದ್ದ ಜನರು ಮಾಜಿ ಶಾಸಕಿ ಹಾಗೂ ಹಾಲಿ ಪಕ್ಷೇತರ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿಯವರ ಮನೆಗೆ ಆಗಮಿಸಿ ಶಾರದಾ ಶೆಟ್ಟಿಯವರಲ್ಲಿ ಉಭಯಕುಶಲೋಪರಿ ವಿಚಾರಿಸಿ, ಕಾಂಗ್ರೆಸ್ ನಿಂದ ನೀವೇ ಸ್ಪರ್ಧೆ ಮಾಡುವಂತೆ ಪಟ್ಟುಹಿಡಿದರು. ಯತಾರ್ಥದಲ್ಲಿ ಕಾಂಗ್ರೆಸ್ ನಿಯೋಜಿಸಿರುವ ಈ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಸಾರಿ ಹೇಳಿದಂತಿತ್ತು.


ಆಗಮಿಸಿದ ಜನರು ರಸ್ತೆಯಲ್ಲಿ ಸಾಗುತ್ತಿದ್ದವರು ಏಕಾಏಕಿ ಮಾಜಿ‌ ಶಾಸಕಿ‌ ಶಾರದಾ ಶೆಟ್ಟಿಯವರ ಮನೆಯ ಎದುರಲ್ಲಿ ಬರುತ್ತಿದ್ದಂತೆ ಮನೆಯ ಕಂಪೌಂಡ್ ಒಳಗೆ ಪ್ರವೇಶಿಸಿದ್ದಾರೆ. ಮನೆಯ ಜಗಲಿಗೆ ಬಂದ ಶಾರದಾ ಶೆಟ್ಟಿಯವರ ಹಸ್ತಲಾಘವ ಮಾಡುವ ಮೂಲಕ ಪ್ರೀತಿಯಿಂದ ಶಾರದಾ ಶೆಟ್ಟಿಯವರನ್ನು ಮಾತನಾಡಿಸುತ್ತಿದ್ದಂತೆ ಅಭಿಮಾನಿಗಳ ಪ್ರೀತಿಗೆ ಭಾವುಕರಾದ ಮಾಜಿ ಶಾಸಕಿ ಕಣ್ಣೀರು ಸುರಿಸುತ್ತಾ ಕಾರ್ಯಕರ್ತರಿಗೆ ಕೈ ಮುಗಿದರು.

ಶಾರದಾ ಶೆಟ್ಟಿಯವರಿಗೆ ಜಯವಾಗಲಿ ಎಂಬ ಘೋಷಣೆಯನ್ನೂ ಕೂಗುವ ಮೂಲಕ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಾಗೂ ತಲೆಯಲ್ಲಿ ಕಾಂಗ್ರೆಸ್ ಟೋಪಿ ಧರಿಸಿದ್ದೂ ಮನದಲ್ಲಿ ಶಾರದಾ ಶೆಟ್ಟಿಯವರಿಗೆ ಬೆಂಬಲಿಸುತ್ತಿದ್ದೇವೆ ಎಂಬುದನ್ನು ಅಲ್ಲಿದ್ದ ಜನರು ಮುಕ್ತವಾಗಿ ತೋರ್ಪಡಿಸಿದರು.

ಸರಿಸುಮಾರು ಐದುನೂರಕ್ಕೂ ಹೆಚ್ಚು ಜನರು ಈ ಸಂದರ್ಭದಲ್ಲಿ ಇದ್ದು ಶಾರದಾ ಶೆಟ್ಟಿಯವರ ಮೇಲೆ ಅಭಿಮಾನದ ಮಾತುಗಳನ್ನಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.