Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಸತತ ಮೂರನೇ ಬಾರಿಗೆ ರಾಜ್ಯಮಟ್ಟದ ಸ್ಥಾನದೊಂದಿಗೆ 100% ಫಲಿತಾಂಶ ನೀಡಿದ ಸರಸ್ವತಿ ಪಿ.ಯು ಕಾಲೇಜು.

ಕುಮಟಾ: ತಾಲ್ಲೂಕಿನ ವಿಧಾತ್ರಿ ಅಕಾಡೆಮಿಯು ಕೊಂಕಣ ಎಜುಕೇಷನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಸಹಭಾಗಿತ್ವವನ್ನು ಹೊಂದಿದ ನಂತರ ಸತತವಾಗಿ ಮೂರನೇ ವರ್ಷವೂ ರಾಜ್ಯ ಮಟ್ಟದ ಸ್ಥಾನದೊಂದಿಗೆ ಪರೀಕ್ಷೆಗೆ ಹಾಜರಾದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ಪ್ರತಿಶತ ನೂರಕ್ಕೆ ನೂರು ಫಲಿತಾಂಶವನ್ನು ನೀಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಕು. ರಂಜನಾ ಮಡಿವಾಳ ೫೮೮ (೯೮%) ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೯ ನೇ ಸ್ಥಾನ ಪಡೆಯುವುದರ ಮುಖಾಂತರ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಕು. ಶ್ರೀನಂದಾ ದಿಂಡೆ ೫೮೬ (೯೭.೬೭%) ಅಂಕ ಪಡೆದು ದ್ವಿತೀಯ ಸ್ಥಾನ, ಕು. ಪ್ರಾಪ್ತಿ ನಾಯಕ ೫೮೫ (೯೭.೫%) ಅಂಕ ಹಾಗೂ ಕು. ಶ್ರೀಜನಿ ಭಟ್ ೫೮೫ (೯೭.೫%) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ ವಿಜ್ಞಾನ ವಿಭಾಗದ ೧೦೪ ವಿದ್ಯಾರ್ಥಿಗಳಲ್ಲಿ ೧೮ ವಿದ್ಯಾರ್ಥಿಗಳು ಶೇಕಡಾ ೯೫ಕ್ಕಿಂತ ಹೆಚ್ಚು ಅಂಕ ಪಡೆದು, ೨೬ ವಿದ್ಯಾರ್ಥಿಗಳು ಶೇಕಡಾ ೯೦ಕ್ಕಿಂತ ಹೆಚ್ಚು ಅಂಕ ಪಡೆದು ಮತ್ತು ೨೨ ವಿದ್ಯಾರ್ಥಿಗಳು ಶೇಕಡಾ ೮೫ಕ್ಕಿಂತ ಹೆಚ್ಚು ಅಂಕ ಪಡೆದು ಒಟ್ಟು ೬೬ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಹಾಗೂ ೩೬ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕು. ಶ್ರೀಲಕ್ಷ್ಮಿ ಶೆಟ್ಟಿ ೫೮೮ (೯೮%) ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೧೦ ನೇ ಸ್ಥಾನ ಪಡೆಯುವುದರ ಮುಖಾಂತರ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಕು. ಮೇಹರ್ಸೈಯದ್ ೫೮೧ (೯೬.೮೩%) ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಕು. ರೋಶನಿ ನಾಯಕ ೫೮೦ (೯೬.೬೭%) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ ವಾಣಿಜ್ಯ ವಿಭಾಗದ ೨೧ ವಿದ್ಯಾರ್ಥಿಗಳಲ್ಲಿ ೧೫ ವಿದ್ಯಾರ್ಥಿಗಳು ಶೇಕಡಾ ೮೫ ಕ್ಕಿಂತ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಹಾಗೂ ೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.