ಹಳಿಯಾಳ: ಕಾಂಗ್ರೆಸ್‌ನಲ್ಲಿ ನಾಮಧಾರಿ ಸಮಾಜಕ್ಕೆ ಟಿಕೇಟ್ ನೀಡುವಲ್ಲಿ ನನ್ನ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಪ್ರಣವಾನಂದ ಸ್ವಾಮೀಜಿಗಳು ಆಕ್ರೋಶ ಎನ್ನುವ ಅಡಿ ಬರಹದಲ್ಲಿ ಸುದಿಗಳು ಪ್ರಕಟವಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಹೇಳಿದರು.
ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಪ್ರತಿಯೊಂದು ಸಮುದಾಯವನ್ನು ಸಮಾನವಾಗಿ ನೋಡಿಕೊಂಡು ಬಂದಿದ್ದೇನೆ. ಜಾತಿ ವಿಚಾರದಲ್ಲಿ ಯಾವತ್ತು ಮನ್ನಣೆ ಹಾಕಿಲ್ಲ. ನನ್ನ ಜಿಲ್ಲೆಯ ಪ್ರತಿಯೊಂದು ಸಮಾಜದ ಜನ ಮುಂದೆ ಬಂದರೆ ವೈಯಕ್ತಿಕವಾಗಿ ನನಗೆ, ತುಂಬಾ ಸಂತೋಷ ಪಡುವವರಲ್ಲಿ ನಾನು ಒಬ್ಬ. ನಾಮಧಾರಿ ಸಮುದಾಯ ಮೊದಲಿನಿಂದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ನನ್ನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಬಹುಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ನನ್ನ ಒತ್ತಾಯ ಸಹ ಇದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.