Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಹಿರೇಗುತ್ತಿ ಸರಕಾರಿ ಪ.ಪೂ. ಕಾಲೇಜು

ಕುಮಟಾ: ತಾಲೂಕಿನ ಹಿರೇಗುತ್ತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಒಟ್ಟೂ ೨೪೭ ವಿದ್ಯಾರ್ಥಿಗಳಲ್ಲಿ ೨೨೮ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.೯೨.೩೦ ಫಲಿತಾಂಶ ದಾಖಲಾಗಿದೆ.

ಕಾಲೇಜಿನ ಮೂರು ಸಂಯೋಜನೆಗಳಲ್ಲಿ ಒಟ್ಟೂ ೨೬ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ೧೦೯ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಒಟ್ಟೂ ೧೦೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೯೭.೨೭ ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನವನ್ನು ಕು. ಎಂ ದರ್ಶನ ೫೬೦ ಅಂಕಗಳೊಂದಿಗೆ  ಶೇ ೯೩.೩೩ ಫಲಿತಾಂಶ, ದ್ವಿತೀಯ ಸ್ಥಾನ ಕು. ರಾಮಚಂದ್ರಗೌಡ, ೫೪೨ ಅಂಕಗಳೊಂದಿಗೆ ಶೇ. ೯೦೩೩ ಫಲಿತಾಂಶ ಹಾಗೂ ತೃತೀಯ ಸಥಾನ ಕು. ಕುಮುದಾ ಗಣಪತಿ ಗೌಡ ೫೩೫ ಅಂಕಗಳೊಂದಿಗೆ ಶೇ ೮೯.೧೬ ಫಲಿತಾಂಶಗಳೊಂದಿಗೆ ಶೇ ೮೯.೧೬ ಫಲಿತಾಂಶ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ೧೦೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟೂ ೮೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೮೬ ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನವನ್ನು ಕುಮಾರಿ ಶೃತಿ ಸುಧಾಕರ ಭಂಡಾರಿ ೫೮೧ ಅಂಕಗಳೊಂದಿಗೆ ಶೇ ೯೬.೮೩ ಫಲಿತಾಂಶ, ದ್ವೀತಿಯ ಸ್ಥಾನ ಕುಮಾರಿ ದೀಪಿಕಾ ವೆಂಕಟ್ರಮಣ ಗಾವಡಿ ೫೭೮ ಅಂಕಗಳೊಂದಿಗೆ  ಶೇ. ೯೬.೩೩ ಫಲಿತಾಂಶ ಹಾಗೂ ತೃತೀಯ ಸ್ಥಾನ ಕುಮಾರಿ ನಾಗಶ್ರೀ ನಾಗಪ್ಪ ಗೌಡ, ೫೬೭ ಅಂಕಗಳೊಂದಿಗೆ ಶೇ ೯೪.೫ ಫಲಿತಾಂಶ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ೩೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು ೩೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೯೫ ಫಲಿತಾಂಶ ದಾಖಲಾಗಿದೆ. ಪ್ರಥಂ ಸ್ಥಾಣ ಕುಮಾರಿ ಅನನ್ಯಾ ಸುರೇಶ ನಾಯಕ ೫೬೦ ಅಂಕಗಳೊಂದಿಗೆ ಶೇ. ೯೩.೩೩ ಫಲಿತಾಂಶ, ದ್ವಿತೀಯ ಸ್ಥಾನ ಕುಮಾರಿ ಪ್ರತೀಕಾ ಚಂದ್ರಕಾಂತ ನಾಯ್ಕ ೫೪೯ ಅಂಕಗಳೊಂದಿಗೆ ಶೇ. ೯೧.೫ ಫಲಿತಾಂಶ ಹಾಗೂ ತೃತೀಯ ಸ್ಥಾನ ಕುಮಾರ ಓಂಕಾರ ಜನಾರ್ಧನ ಶಾನಭಾಗ ೫೪೪ ಅಂಕಗಳೊಂದಿಗೆ ಶೇ.೯೦.೬೬ ಫಲಿತಾಂಶ ಪಡೆದಿದ್ದಾರೆ.