ಕುಮಟಾ: ತಾಲೂಕಿನ ಬಾಡದ ನೇಸರ ರಸಾರ್ಟನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೋಲಿಸರು ಖಚಿತ ಮಾಹಿತಿ ಮೇರೆಗೆ ಪೊಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದು, ರೆಸಾರ್ಟನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 32 ಸಾವಿರ ರೂಪಾಯಿ, 8 ಮೊಬೈಲ್ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಆರಾಮಬೊಡ್ಡಿಯ ನಾಗೇಶ ಮಂಜಪ್ಪ ಶೆಟ್ಟಿ,ಗುಲ್ಬರ್ಗಾ ಜೇವರ್ಗಿ ಅರೀಪ್ ಮುಲ್ಲಾ, ನೇಸರ, ಎಂಬುವರಿಗೆ ರೆಸಾರ್ಟ ಮಾಲೀಕರು ರೆಸಾರ್ಟ ನಡೆಸಲು ನೀಡಿದ್ದರು, ಆದರೆ ತಮ್ಮ ಲಾಭಕೋಸ್ಕರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನೈತಿಕ ಚಟುವಟಿಕೆಗಳನ್ನು ನಡಸಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರು ಹಾಗೂ ಕೊಲ್ಕತ್ತಾ ಮೂಲದ ಇಬ್ಬರು ಸಂತ್ರಸ್ತ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಖಚಿತ ಮಾಹಿತಿ ಆದರಿಸಿ, ದಾಳಿ ನಡೆಸಿದ ಪೋಲಿಸರು, ನಾಲ್ವರ, ವಿರುದ್ದ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಭಟ್ಕಳದ ಡಿವೈಎಸ್‌ಪಿ ಶ್ರೀಕಾಂತ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕುಮಟಾ ಪಿಎಸ್‌ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.