ಕಾರವಾರ: ನೀರಿಲ್ಲದ ಜಾಗದಿಂದ ಜಲಜೀವನ ಮಿಷನ್ ಯೋಜನೆಯಡಿ ನೀರೆತ್ತಿ ಕುಮಟಾ ತಾಲೂಕಿನ ೧೪ ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
ಅವರು ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡು ಮಾತನಾಡಿದರು. ಕುಡಿಯುವ ನೀರಿನ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ದಿವಳ್ಳಿಯಲ್ಲಿ ಈ ಯೋಜನೆಗಾಗಿ ಗುರುತಿಸಿದ ಸ್ಥಳ ಅವೈಜ್ಞಾನಿಕವಾಗಿದೆ. ಕುಮಟಾ ತಾಲೂಕಿನ ೧೪ ಗ್ರಾ.ಪಂಗಳ ೫೩ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ೧೬೯ ಕೂಟಿ ರೂ ಖರ್ಚಿನಲ್ಲಿ ಅಘನಾಶಿನಿ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಸಾಗಿಸುವ ಉದ್ದೇಶ ಹೊಂದಲಾಗಿದೆ. ಆದರೆ ದಿವಳ್ಳಿಯಲ್ಲಿ ವರ್ಷವಿಡಿ ನದಿಯಲ್ಲಿ ನೀರು ಇರುವುದಿಲ್ಲ. ಆದರಿಂದ ಈ ಯೋಜನೆ ವಿಫಲವಾಗಿದೆ. ಆದ್ದರಿಮದ ಯೋಜನೆಯ ಸ್ಥಳವನ್ನು ಉಪ್ಪಿನಪಟ್ಟಣ ಇಲ್ಲವೆ ಮರಾಕಲ್‌ನಲ್ಲಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.ಸಂತೆಗುಳಿ ಬಳಿ ದಿವಳ್ಳಿಯಲ್ಲಿ ಜೆ.ಜೆ.ಎಂ ಯೋಜನೆಯ ಸ್ಥಳವನ್ನು ಕೈಬಿಡಬೇಕು. ಕೆಳಭಾಗವಾದ ಬೊಗ್ರಿಬೈಲ್, ಉಪ್ಪಿನಪಟ್ಟಣದ, ಕುಡುವಳ್ಳಿ-ಹೊನ್ನಳ್ಳಿಯ ಮಧ್ಯಭಾಗ ಅಥವಾ ಮರಾಕಲ್ ಎಂಬಲ್ಲಿ ಮಿನಿ ಆಣೆಕಟ್ಟು ನಿರ್ಮಿಸಿ ೧೪ ಗ್ರಾ.ಪಂಗಳಿಗೆ ಕುಡಿಯಲು ನೀರು ಪೂರೈಸಲು ಯೋಜನೆ ರೂಪಿಸಬೇಕು. ಯೋಜನೆಗೆ ಖರ್ಚಾಗುವ ಅನುದಾನ ಪೂಲು ಆಗದಂತೆ ನೋಡಿಕೋಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ರೈತ ಹೋರಾಟ ಸಮಿತಿಯ ಅಧ್ಯಕ್ಷರಾದ ಟಿ.ಪಿ.ಹೆಗಡೆ, ಹಿರಿಯಾ ಗೌಡ, ರಾಜಾರಾಮ ಭಟ್, ವಿಷ್ಣು ಪಟಗಾರ, ದತ್ತು ಹರಿಕಾಂತ್ರ ಮುಂತಾದವರು ಉಪಸ್ಥಿತರಿದ್ದರು.