ಕುಮಟಾ: ಉತ್ತರ ಕನ್ನಡ ಜಿಲ್ಲಾ ಮಟ್ಟದ 6-14 ವಯೋಮಾನದ ಟಿಜಿಟಿ ವಿಭಾಗದ ಬಾಲಕರ ಟೇಬಲ್ ಟೆನ್ನಿಸ್ ಪಂದ್ಯ ಅಕ್ಟೊಬರ್ 7 ರಂದು ಕಾರವಾರದಲ್ಲಿ ನಡೆದಿದ್ದು, ಸಿ ವಿ ಎಸ್ ಕೆ ಕುಮಟಾ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ಹೆಚ್. ಯು.ಸುಮುಖ ಇವನು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಈ ಸಾಧನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಎಲ್ ಭಟ್, ಸಮನ್ವಯಾಧಿಕಾರಿಗಳಾದ ರೇಖಾ ಸಿ ನಾಯ್ಕ, ಜಿಲ್ಲಾ ದೈಹಿಕ ಪರಿವೀಕ್ಷಕರಾದ ಎಸ್ ಬಿ ನಾಯಕ ಮತ್ತು ಸಿಬ್ಬಂದಿ ವರ್ಗದವರು ಪ್ರೌಢಶಾಲೆಯ ಮುಖಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಈತನು ಕುಮಟಾದ "ಕುಮಟಾ ಸ್ಪೋರ್ಟ್ಸ್ ಹೌಸ್ 'ನಲ್ಲಿ ತರಬೇತಿ ಪಡೆಯುತ್ತಿದ್ದು ತರಬೇತುದಾರರಾದ ನವೀನ್ ನಾಯ್, ಸುನಿಲ ನಾಯ್ಕ, ಎನ್. ಜಿ.ಭಟ್ ಇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಮೇ 28 ರಂದು ಕುಮಟಾ ಸ್ಪೋರ್ಟ್ಸ್ ಹೌಸ್ ನಲ್ಲಿ ನಡೆದ ಇಲಾಖೇತರ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ 14-16 ವಯೋಮಾನದ ಸ್ಪರ್ಧೆಯಲ್ಲಿ ಈತನು ದ್ವಿತೀಯ ಸ್ಥಾನವನ್ನು ಪಡೆದಿದ್ದನು.ಕೆಲ ತಿಂಗಳ ಹಿಂದೆ ನಡೆದ, ಜುಲೈ 29 ರಂದು "ಪ್ರಕಾಶ್ ಕೋರ್ಟ್ ದಿ ಕೆನರಾ ಯೂನಿಯನ್ ರೀ ಮಲ್ಲೇಶ್ವರಂ ಬೆಂಗಳೂರು'ಇಲ್ಲಿ ನಡೆದ ರಾಜ್ಯಮಟ್ಟದ ಇಲಾಖೇತರ ಟೇಬಲಟೆನ್ನಿಸ್ ನಲ್ಲಿಯೂ ಸಹ ಈತನು ತಾಲೂಕನ್ನು ಪ್ರತಿನಿಧಿಸಿದ್ದನು. ಇವರು ಇವನು ಶಿಕ್ಷಕ ದಂಪತಿಗಳಾದ ಭಾರತಿ ನಾಯ್ಕ, ಮತ್ತು ಉಮೇಶ್ ನಾಯ್ಕ ಇವರ ಮಗನಾಗಿದ್ದಾನೆ.