ಕುಮಟಾ: ಕೆಲವು ದಿನಗಳ ಹಿಂದೆ ಬಂಗಣೆ ಭಾಗದ ಗ್ರಾಮಸ್ಥರು ಬಸ್ ಸೇವೆ ಕಲ್ಪಿಸುವಂತೆ ಜಿ.ಪಂ ಮಾಜಿ ಸದಸ್ಯರಾದ ಗಜಾನನ ಪೈ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಶಾಸಕ ದಿನಕರ ಶೆಟ್ಟಿಯವರು ತಕ್ಷಣವೇ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ಅವರಲ್ಲಿ ಮಾತನಾಡಿ ಈ ಭಾಗಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈ ಬಂಗಣೆ ಭಾಗದ ಗ್ರಾಮಸ್ಥರು ಜಿ.ಪಂ ಮಾಜಿ ಸದಸ್ಯ ಗಜಾನನ ಪೈ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಜಿ.ಪಂ ಮಾಜಿ ಸದಸ್ಯರಾದ ಗಜಾನನ ಪೈ ಅವರು ಮಾತನಾಡಿ ಈ ಗ್ರಾಮವು ಗುಡ್ಡಗಾಡು ಪ್ರದೇಶ. ಈ ಭಾಗದ ಜನರಿಗೆ, ಹಾಗೂ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಅನುಕೂಲವಾಗಲಿದೆ. ಮೊದಲು ಇಲ್ಲಿನ ರಸ್ತೆ, ಬ್ರೀಜ್ ಸೇರಿದಂತೆ ಮೂಲಭೂತ ಸಮಸ್ಯೆ ಇತ್ತು.
ಆದರೆ ಈಗ ಶಾಸಕ ದಿನಕರ ಶೆಟ್ಟಿವರ ಪ್ರಯತ್ನದಿಂದ ಈ ಭಾಗಕ್ಕೆ ಬಸ್ ಸಂಚಾರ ಆರಂಭವಾಗಿದೆ. ಈ ಭಾಗದ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೋಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯರು, ಸಾರಿಗೆ ಇಲಾಖೆಯ ಸಿಬ್ಬಂದಿಗಳು ಇದ್ದರು.