ಕುಮಟಾ: ಶಾಸಕ ದಿನಕರ ಶೆಟ್ಟಿ ಅವರು ಪುರಸಭೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ದಿನದ ಹಾಜರಾತಿ ಹಾಗೂ ಕಾರ್ಯವೈಖರಿ ಕುರಿತು ಪರೀಶಿಲನೆ ನಡೆಸಿದರು.
ಪಟ್ಟಣದ ಅಭಿವೃದ್ದಿಗೆ ವೇಗ ನೀಡುವ ದೃಷ್ಠಿಯಿಂದೆ ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸಲು ಸೂಚಿಸಿದರು. ಈ ವೇಳೆ ಪುರಸಭಾ ಅಧ್ಯಕ್ಷರಾದ ಮೋಹಿನಿ ಗೌಡ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಹರ್ಮಲ್ಕರ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.