Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಅತ್ಯುತ್ತಮ ಘನತ್ಯಾಜ್ಯ ನಿರ್ವಹಣೆಗೆ ಕುಮಟಾ ಪುರಸಭೆ ರಾಜ್ಯಕ್ಕೆ ಪ್ರಥಮ

ಕುಮಟಾ: ಘನತ್ಯಾಜ್ಯ ಅತ್ಯುತ್ತಮ ನಿರ್ವಹಣೆಯಲ್ಲಿ ಕುಮಟಾ ಪುರಸಭೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಹಿನ್ನಲೆಯಲ್ಲಿ ಸರಕಾರ 1 ಲಕ್ಷ ರೂ ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಿದೆ.

2018-19ನೇ ಸಾಲಿನಲ್ಲಿ ಪುರಸಭೆ ವ್ಯಾಪಕವಾಗಿ ಪಟ್ಟಣದ ಸ್ವಚ್ಛತೆಯ ಅಭಿಯಾನದಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಪ್ರಚಾರದ ಮೂಲಕ ಜನರಲ್ಲಿ ಜಾಗೃತಿ ಮಾಡಿದ ಪರಿಣಾಮ ಪಟ್ಟಣದಲ್ಲಿ  ಸ್ಚಚ್ಛ ಪರಿಸರವನ್ನು ಕಾಣುವ ಪರಿಸ್ಥಿತಿನ ನಿರ್ಮಾಣಗೊಂಡಿತ್ತು. ಪುರಸಭೆ ಮುಖ್ಯಾಧಿಕಾರಿ  ಸುರೇಶ ಎಂ.ಕೆ. ಅವರ ಜೋತೆಗೆ ಅಂದಿನ ಪರಿಸರ ಅಭಿಯಂತರ ನಾಗೇಂದ್ರ ಗಾಂವ್ಕರ್ ಅವರು ಜಂಟಿಯಾಗಿ  ಕಾರ್ಯ ನಿರ್ವಹಿಸಿದರು. 
ಕುಮಟಾ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದರ ಜೋತೆಗೆ  ಘನತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಮತ್ತು ಜಾಗೃತಿ ಹಾಗೂ ಪ್ರಚಾರದಲ್ಲೂ ಕೂಡಾ ಮಾದರಿಯಾಗುವಂತೆ ಕುಮಟಾ ಪುರಸಭೆ ಕಾರ್ಯನಿರ್ವಹಿಸಿದೆ. ಈ ಕಾರ್ಯವನ್ನು ಪರಿಗಣಿಸಿದ ನಗರಾಭಿವೃದ್ದಿ ಹಾಗೂ ಪೌರಾಡಳಿತ ಇಲಾಖೆ ಕುಮಟಾ ಪುರಸಭೆಗೆ ಪ್ರಥಮ ಸ್ಥಾನ ನೀಡಿ ಪುರಸ್ಕರಿದೆ. ಹೀಗಾಗಿ  ಪಟ್ಟಣದಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ಸ್ಚಚ್ಛತೆ ಕಾಪಾಡಲು ಸಾಧ್ಯವಾಯಿತು.

ಕುಮಟಾ ಪುರಸಭೆಯ ಸಾಧನೆಗೆ ಶಾಸಕ ದಿನಕರ ಶೆಟ್ಟಿ, ಪುರಸಭೆಯ ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ರಾಜೇಶ ಪೈ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನೀಲ್ ಹರ್ಮಲ್ಕರ್ ಹಾಗೂ ಸದಸ್ಯರು, ಪುರಸಭೆಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.