ಕಾರವಾರ : ತೀವ್ರ ಕುತೂಹಲ ಮೂಡಿಸಿದ ಉತ್ತರಕನ್ನಡ ಲೋಕಸಭಾ ಅಭ್ಯರ್ಥಿ ಆಯ್ಕೆಯಲ್ಲಿ ಹಾಲಿ ಸಂಸದರಾದ ಅನಂತಕುಮಾರ ಹೆಗಡೆ ಹೆಸರು ಕೈ ಬಿಡಲಾಗಿದೆ. ಬಿಜೆಪಿಯ ಲೋಕಸಭಾ ಕ್ಷೇತ್ರದ ೫ ನೇ ಪಟ್ಟಿ ಬಿಡುಗಡೆಯಾಗಿದ್ದು, ಮಾಜಿ ವಿಧಾನಸಭಾ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೇಟ್ ಸಿಕ್ಕಿದೆ. ಹಾಲಿ ಸಂಸದರಾದ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈ ತಪ್ಪಿದ್ದು, ಇದರೊಂದಿಗೆ ಹಾಲಿ ಸಂಸದ ಅನಂತಕುಮಾರ ಹೆಗಡೆ ನಡೆ ಈಗ ನಿಗೂಢವಾಗಿದೆ. ಅವರ ಬೆಂಬಲಿಗರು ಪಕ್ಷೇತರವಾಗಿ ಸ್ವರ್ದಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.