Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಶಿಕ್ಷಣ ಪ್ರಕೋಸ್ಟ ದ ರಾಜ್ಯ ಸಹ ಸಂಚಾಲಕರಾಗಿ ಎಂಜಿ ಭಟ್ ಆಯ್ಕೆ


ಕುಮಟಾ:  ಶಿಕ್ಷಣ ಪ್ರಕೋಸ್ಟದ ರಾಜ್ಯ ಸಹ ಸಂಚಾಲಕ ರನ್ನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶ್ರೀ ಎಮ್ ಜಿ ಭಟ್ ಇವರನ್ನು ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ನಿಯುಕ್ತಿಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. 
   MSc MA BEd ಪದವೀಧರರಾದ ಎಂಜಿ ಭಟ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದದ್ದಾರೆ.15000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ. ಜನಪರ ಹೋರಾಟ ವೇದಿಕೆಯ ಮೂಲಕ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿದ್ದು ಅಲ್ಲದೆ ಎಬಿವಿಪಿಯ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಸಂಘ ಪರಿವಾರದಿಂದ ಬಂದ ಎಂ ಜಿ ಭಟ್ಟರು ಹಲವಾರು ವರ್ಷ ಗಳಿಂದ ಬಿಜೆಪಿ ಯಲ್ಲಿ  ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಸಿತ್ತಿದ್ದು ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸಿ ಅಪಾರವಾದ ಜನ ಮನ್ನಣೆ ಗಳಿಸಿದ್ದಾರೆ.
  ಇವರಿಗೆ ಸಿಕ್ಕಿದ ರಾಜ್ಯದ ಜವಾಬ್ದಾರಿಯಿಂದ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಎಮ್ ಜಿ ಭಟ್ಟರ ಅಭಿಮಾನಿಗಳು ಅವರ ಹಿತೈಷಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.