ಶಿರಸಿ: ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ರೈತ ಮೋರ್ಚಾದ ಉಪಾಧ್ಯಕ್ಷರನ್ನಾಗಿ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇಮಕ ಮಾಡಲಾಗಿದೆ.
ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಜಿಲ್ಲಾ ಪದಾಧಿಕಾರಿಯಾಗಿ ಪಟ್ಟಿಯನ್ನು ನೀಡಿದ್ದು, ಉಪಾಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ತಮ್ಮದೇ ಆದ ರೀತಿಯಲ್ಲಿ ಸಮಾಜಸೇವೆ ಮಾಡಿ ಜಿಲ್ಲೆಯ ಜನರ ಪಾಲಿನ 'ಬಡವರ ಬಂಧು' ವೆನಿಸಿದ ಅನಂತಮೂರ್ತಿ ಹೆಗಡೆಯವರಿಗೆ ಹುದ್ದೆ ನೀಡಿದ್ದು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುಲು ಇದು ಸಹಕಾರಿಯಾಗಿದೆ.
ತಮಗೆ ನೀಡಿದ ಹುದ್ದೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅನಂತಮೂರ್ತಿ ಹೆಗಡೆ, ಪಕ್ಷದಲ್ಲಿ ಸೇವೆ ಮಾಡಲು ಹುದ್ದೆ ನೀಡಿದ್ದು ಸಂತಸವಾಗಿದೆ. ಅದರಲ್ಲೂ ರೈತ ಮೋರ್ಚಾದಲ್ಲಿ ಸೇವೆ ಸಲ್ಲಿಸುವ ಅವಕಾಶ ವಿಶೇಷವಾದ್ದದ್ದು, ಪಕ್ಷದಲ್ಲಿ ರೈತರ ಪಾಲ್ಗೊಳ್ಳಿವಿಕೆ ಹಾಗೂ ಅವರ ಸಮಸ್ಯೆಗಳನ್ನು ಪಕ್ಷದ ಹುದ್ದೆಯೊಂದಿಗೆ ಚರ್ಚಿಸಲು ಒಂದು ವೇದಿಕೆಯಾಗಿ ಸಿಕ್ಕಂತಾಗಿದೆ. ನನಗೆ ಹುದ್ದೆ ನೀಡಲು ಸಹಕರಿಸಿದ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪನವರಿಗೆ, ಜಿಲ್ಲಾಧ್ಯಕ್ಷರಾದ ಎನ್. ಎಸ್. ಹೆಗಡೆ ಹಾಗೂ ರೈತ ಮೋರ್ಚಾದ ಅಧ್ಯಕ್ಷರಾದ ರಮೇಶ್ ನಾಯ್ಕ ಕುಪ್ಪಳ್ಳಿಯವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.