ಹೊನ್ನಾವರ : ಕಿರಣ್ ಭಂಡಾರಿ ಮಾಲೀಕತ್ವದ ಲೆವೆನ್ ಸ್ಟಾರ್ ತಂಡ ಚಾಂಪಿಯನ್ ಸಾಲಿಕೇರಿ ಪ್ರೀಮಿಯರ್ ಲೀಗ್ ಸೀಸನ್-೩ ೨೦೨೪ ಕ್ರಿಕೇಟ್ ಪಂದ್ಯಾವಲಿಯನ್ನು ದೀಪ ಬೆಳಗಿಸಿ ಪಾರಿವಾಳ ಹಾರಿಸುವ ಮುಖಾಂತರ ಉದ್ಘಾಟನೆ ಗೊಂಡಿತ್ತು.
ಈ ಪಂದ್ಯಾವಳಿಯಲ್ಲಿ ಬಲಿಷ್ಠ ಆರು ತಂಡಗಳಾದ ನವೀನ ನಾಯ್ಕ ಮಾಲೀಕತ್ವದ ಶುಭಂ ವಾರಿಯರ್ಸ್,ಗಿರೀಶ ಗೌಡ ಮಾಲೀಕತ್ವದ ಮಾರಿಕಾಂಬಾ ವಾರಿಯರ್ಸ್,ಮಾಸ್ತಿ ಗೌಡ ಮಾಲಿಕತ್ವದ ರಾಮಧೂತ ಇಲೆವೆನ್, ಕಿರಣ ಭಂಡಾರಿ ಮಾಲೀಕತ್ವದ ಲೆವೆನ್ ಸ್ಟಾರ್, ನವೀನ ಭಂಡಾರಿ ಮಾಲೀಕತ್ವದ ಕಿಂಗ್ಸ್ ಇಲೆವೆನ್, ಸುರೇಶ ಗೌಡ ಮಾಲೀಕತ್ವದ ಮಾರಿಕಾಂಬಾ ಬ್ಲೂ ತಂಡವು ಭಾಗವಹಿಸಿದವು. ಫೈನಲ್ ಪಂದ್ಯದಲ್ಲಿ ಕಿರಣ ಭಂಡಾರಿ ಮಾಲೀಕತ್ವದ ಲೆವೆನ್ ಸ್ಟಾರ್ಟ್ ತಂಡವು ನವೀನ ಭಂಡಾರಿ ಮಾಲೀಕತ್ವದ ಕಿಂಗ್ಸ್ ಇಲೆವೆನ್ ತಂಡವನು ಸೋಲಿಸಿ ಎಸ್ ಪಿ ಲ್ -೨೦೨೪ ರ ಚಾಂಪಿಯನ್ ಆಗಿ ಕಿರಣ ಭಂಡಾರಿ ಮಾಲೀಕತ್ವದ ಲೆವೆನ್ ಸ್ಟಾರ್ಟ್ ತಂಡ ಹೊರಹೊಮ್ಮಿತ್ತು. ನವೀನ ಭಂಡಾರಿ ಮಾಲೀಕತ್ವ ಕಿಂಗ್ಸ್ ಇಲೆವೆನ್ ತಂಡ ದ್ವೀತಿಯ ಸ್ಥಾನವನ್ನು ಪಡೆಯಿತು.
ಲೆವೆನ್ ಸ್ಟಾರ್ ತಂಡದ ಮಹೇಶ ಗೌಡ ಸರಣಿ ಶ್ರೇಷ್ಠ ಪ್ರಶಸ್ತಿ, ಲೆವನ್ ಸ್ಟಾರ್ಟ್ ತಂಡದ ಚಂದ್ರು ಗೌಡ ಬೆಸ್ಟ್ ಬೌಲರ್ ಪ್ರಶಸ್ತಿ, ಕಿಂಗ್ಸ್ ಇಲೆವೆನ್ ತಂಡದ ಚಿದಾನಂದ ಗೌಡ ಬೆಸ್ಟ್ ಬ್ಯಾಟಿಂಗ್ ಪ್ರಶಸ್ತಿ, ಲೇವೆನ್ ಸ್ಟಾರ್ ತಂಡದ ಕಿರಣ ಭಂಡಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ, ಮಾರಿಕಾಂಬಾ ವಾರಿಯರ್ಸ್ ತಂಡದ ಸುಬ್ರಮಣ್ಯ ಗೌಡ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದರು.
.ಬಹುಮಾನ ವಿತರಣಾ ಸಮಾರಂಭದಲ್ಲಿ ಆರು ತಂಡದ ಮಾಲಿಕರಾದ ನವೀನ ನಾಯ್ಕ, ಗಿರೀಶ ಗೌಡ,ಸುರೇಶ ಗೌಡ, ಮಾಸ್ತಿ ಗೌಡ, ಕಿರಣ ಭಂಡಾರಿ, ನವೀನ ಭಂಡಾರಿ, ಊರಿನ ಮುಖಂಡರಾದ ಕಾಜ ಗೌಡ ರಮೇಶ ಗೌಡ ಮಾರುತಿ ಗೌಡ ಗಣಪತಿ ಗೌಡ ಮತ್ತಿತರರು ಹಾಜರಿದ್ದರು.