ಕುಮಟಾ: ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಡಾ ಎ ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಎನ್ ಸಿ ಸಿ ವಿದ್ಯಾರ್ಥಿಗಳು ಅಂತರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಲೀಡಿಂಗ್ ಕೆಡೆಟ್ ಬಿ.ಎಲ್.ಶ್ರಜನ್ ಮುಂಬೈನಲ್ಲಿ ಜರುಗಿದ ಆಲ್ ಇಂಡಿಯಾ ಸೀ ಟ್ರೈನಿಂಗ್ ಕ್ಯಾಂಪಿನಲ್ಲಿ,ಲೀಡಿಂಗ್ ಕೇಡಿಟ್ ಸುಜಲ್ ಕವರಿ ಮಹಾರಾಷ್ಟ್ರದಲ್ಲಿ ಜರುಗಿದ ಆಲ್ ಇಂಡಿಯಾ ನವ ಸೈನಿಕ್ ಕ್ಯಾಂಪಿನಲ್ಲಿ ಹಾಗೂ ಕೆಡೆಟ್ ಕ್ಯಾಪ್ಟನ್ ಶಿವಧ್ಯಾನ ಗುಜರಾತಿನಲ್ಲಿ ಜರುಗಿದ ನರ್ಮದಾ ಟ್ರೆಕಿಂಗ್ ಕ್ಯಾಂಪ್ನಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಇವರ ಈ ಸಾಧನೆಗೆ ಎನ್ ಸಿ ಸಿ ಗುರುಗಳಾದ ಲೆಫ್ಟಿನೆಂಟ್ ವಿ ಆರ್ ಶಾನಭಾಗ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.