ಕುಮಟಾ: ಕರ್ನಾಟಕ ಸರ್ಕಾರ ಹಾಗೂ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ "ಉನ್ನತಿ ಆರಂಭ" ಯುವ ಉತ್ಸವದಲ್ಲಿ ಕುಮಟಾದ ಡಾ.ಎ ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಬಿ.ಎಲ್.ಶ್ರಜನ್ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ದಾಮೋದರ ಹೆಗಡೆ ವಿಡಿಯೋ ಗ್ರಾಫಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಅದೇ ರೀತಿಯಾಗಿ ಫೋಟೋಗ್ರಾಫಿಯಲ್ಲಿ ಸಂಭ್ರಮ ನಾಯಕ ಸಮಾಧಾನಕರ ಬಹುಮಾನವನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ವಿ ಶೇಣ್ವಿ,ಮುಖ್ಯ ಶಿಕ್ಷಕರಾದ ಸಂತೋಷ ಶಾನಭಾಗ,ಯೂನಿಯನ್ ಚೇರ್ಮನ್ ಡಾ.ಅರವಿಂದ್ ನಾಯಕ, ದೈಹಿಕ ಶಿಕ್ಷಕರಾದ ಡಾ.ಶ್ರೀನಿವಾಸ ಹರಿಕಾಂತ,ಮುಖ್ಯ ಗ್ರಂಥಪಾಲಕರಾದ ಡಾ.ಎಸ್ ಡಿ ಬುಳ್ಳಾ, ಶಿಕ್ಷಕರಾದ ರಾಘು ನಾಯ್ಕ ಹಾಗೂ ಕಾಲೇಜಿನ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.