ಶಿರಸಿ : ಹಿರಿಯ ಸಹಕಾರಿ, ಸಜ್ಜನ ರಾಜಕಾರಣಿ, ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ, ಶೀಗೆಹಳ್ಳಿ ಬುಧವಾರ ಅಪರಾಹ್ನ 3.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ನಗರದ ಸಾಮ್ರಾಟ್ ಅತಿಥಿಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು, ರಾಜಕಾರಣದಲ್ಲಿಯೂ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.ಜನಾನುರಾಗಿಯಾಗಿ ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದ ಇವರ ಅಗಲುವಿಕೆಗೆ ಗಣ್ಯರು ಕಂಬನಿ ನಡೆದಿದ್ದಾರೆ.