ಕುಮಟಾ ತಾಲೂಕಿನ ಕೋನಳ್ಳಿ ಗ್ರಾಮಕ್ಕೆ ಹಾಗೂ ತಾಲೂಕಿನ ಕೆಲವು ಗ್ರಾಮೀಣ ಭಾಗಕ್ಕೆ ನಿಗದಿತ ಸಮಯಕ್ಕೆ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಮಾಜಿ ಶಾಸಕರಾದ ಶಾರದಾ ಶೆಟ್ಟಿಯವರು ಡಿಪೋ ಮೇನೆಜರ್ ರವರಿಗೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರಿಗೆ ತಮ್ಮ ದಿನ ನಿತ್ಯದ ಕೆಲಸ ಕಾರ್ಯದ ನಿಮಿತ್ತ ಕುಮಟಾಕ್ಕೆ ಆಗಮಿಸಲು ಬಸ್ ಇಲ್ಲದೆ ಸಮಸ್ಯೆ ಉಂಟಾಗಿದೆ, ಅಲ್ಲದೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಗಳಿಗೆ ಬರಲು ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ತೊಂದರೆ ಆಗಿದೆ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಕೂಜಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಜಾನನ ನಾಯ್ಕ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ಬಸ್ ಇಲ್ಲದೆ ಸಮಸ್ಯೆ ಉಂಟಾಗಿದೆ, ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ಗಳಿಗೆ ತಲುಪಲು ಸಾಧ್ಯ ವಾಗುತ್ತಿಲ್ಲ. ನಮ್ಮ ಕೂಜಳ್ಳಿ ಪಂಚಾಯತ ವ್ಯಾಪ್ತಿಯ ಕೋನಳ್ಳಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿ.ಎಲ್.ನಾಯ್ಕ ಕೂಜಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ವೈಭವ್ ನಾಯ್ಕ, ಡಿ.ಸಿ.ಸಿ ಕಾರ್ಯದರ್ಶಿ ಗಳು ಹೊನ್ನಪ್ಪ ನಾಯಕ್, ನಾಗೇಶ್ ನಾಯ್ಕ್, ಪುರಸಭೆ ಸದಸ್ಯರಾದ ಎಂ.ಟಿ.ನಾಯ್ಕ ವಿನಯಾ ಜಾರ್ಜ್ ಲಕ್ಷ್ಮೀ ಚಂದಾವರ ಆಶಾ ನಾಯ್ಕ, ಲಕ್ಷ್ಮೀ ಗೊಂಡ, ಹಾಗೂ ಪ್ರಮೋದ್ ನಾಯ್ಕ ಆನಂದು ನಾಯಕ್, ಚಂದ್ರಹಾಸ ನಾಯಕ್, ಮುಜಾಫರ್ ಶೇಖ್,ದಾಕ್ಷಾಯಿಣಿ ಅರಿಗ, ಸಂತೋಷ್ ನಾಯ್ಕ, ಎರ್ನಾಸ್, ಕ್ರಷ್ಣ ದೇವಳಿ, ನಿತ್ಯಾನಂದ ನಾಯ್ಕ ಹಾಗೂ ಊರ ನಾಗರಿಕರು ಮುಂತಾದವರು ಹಾಜರಿದ್ದರು.