ಕುಮಟಾ: ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕರೊನಾ ಲಸಿಕೆಯನ್ನು ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು ಕರೋನಾ ಲಸಿಕೆಯ ಕುರಿತಾಗಿ ಸಾರ್ವಜನಿಕರ ರಂಗದಲ್ಲಿ ಕೆಲವಷ್ಟು ಗೊಂದಲವಿದ್ದು ಅಪಪ್ರಚಾರಗಳು ಕೇಳಿ ಬರುತ್ತಿದೆ. ಆದ ಕಾರಣ ಸಾರ್ವಜನಿಕರಲ್ಲಿ ವಿಶ್ವಾಸವನ್ನು ನೀಡುವ ನಿಟ್ಟಿನಲ್ಲಿ ನಾನು ಹಾಗೂ ನನ್ನ ಧರ್ಮ ಪತ್ನಿಯು ಸಹ ಕರೊನಾ ಲಸಿಕೆಯನ್ನು ಪಡೆದುಕೊಂಡಿದ್ದೇವೆ. 60 ವರ್ಷ ಮೇಲ್ಪಟ್ಟವರು ಹಾಗೂ ಎಲ್ಲಾ ಅರ್ಹರು ಲಸಿಕೆಯನ್ನು ಪಡೆದುಕೊಳ್ಳಿ ಎಂದು ಅಭಿಪ್ರಾಯಪಟ್ಟರು.