ಕಾರವಾರ: ರೈಲ್ವೆ ಡಿಕ್ಕಿ ಹೊಡೆದ ಪರಿಣಾಮ ಗಂಡು ಚಿರತೆಯೊಂದು ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ- ತೋಡೂರು ಭಾಗದ ಬಳಿ ನಡೆದಿದೆ. ಮಂಗಳೂರಿನಿಂದ ಕಾರವಾರದ ಕಡೆಗೆ ತೆರಳುತ್ತಿದ್ದ ರೈಲು ಚಿರತೆಗೆ ಡಿಕ್ಕಿಯಾಗಿದೆ.ಪರಿಣಾಮ ಚಿರತೆಯ ಹಿಂಭಾಗ ಗಂಭೀರವಾಗಿ ಗಾಯಗೊಂಡು ಹಳಿಯ ಪಕ್ಕಕ್ಕೆ ಬಿದ್ದಿದ್ದು ಸಾವನ್ನಪ್ಪಿದೆ.