ಅಂಕೋಲಾ : ಎಲೆ ತುಂಬಿದ ಲಾರಿಗೆ ಆಕಸ್ಮಿ ಬೆಂಕಿ ತಗುಲಿ ಲಾರಿ ಸಂಪೂರ್ಣವಾಗಿ ಭಸ್ಮವಾಗಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.
ಅಂಕೋಲಾ ಯಲ್ಲಾಪುರ ರಸ್ತೆಯ ಕಂಚಿನಬಾಗಿಲು ಬಳಿ ಚಲಿಸುತ್ತಿದ್ದ ಬಿಡಿ ಏಲೆ ತುಂಬಿದ ಲಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಲಾರಿ ಸಂಪೂರ್ಣ ಭಸ್ಮವಾಗಿದೆ. ಬಿಡಿಏಲೆ ತುಂಬಿದ ಲಾರಿ ಗುಜರಾತ್ ನಿಂದ ಮಂಗಳುರಿಗೆ ಚಲಿಸುತ್ತಿತ್ತು ಎನ್ನಲಾದೆ. ಲಾರಿಗೆ ಹೊತ್ತಿ ಉರಿದ ಪರಿಣಾಮ ಅಂಕೋಲಾ-ಯಲ್ಲಾಪುರ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ. ಬೆಂಕಿ ಬಿದ್ದ ಸುದ್ದಿ ತಿಳಿದ ಅಂಕೋಲಾ ಹಾಗೂ ಕಾರವಾರ ಅಗ್ನಿಶಾಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.