ಕುಮಟಾ: ಚುನಾವಣಾ ಪೂರ್ವ ನೀಡಿದ ಭರವಸೆಯನ್ನು ಚುನಾವಣಾ ಬಳಿಕ ಗೆಲುವು ಸಾಧಿಸಿದ ನಂತರ ನುಡಿದಂತೆ ನಡೆದುಕೊಂಡು ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ತಾಲೂಕಿನ ಕೋಡ್ಕಣಿ ಗ್ರಾಮ ಪಂಚಾಯತಿ ಶಶಿಹಿತ್ತಲ ವಾರ್ಡ್ ನಿಂದ ಸ್ಪರ್ದಿಸಿದ್ದ ಅಣ್ಣಪ್ಪ ರುಕ್ಕು ನಾಯ್ಕ ,ಅರಮನೆಕೊಪ್ಪದ ಭವಾನಿ ವೆಂಕಟರಮಣ ಅಂಬಿಗ ಅವರ ಮನೆಗೆ ಕಳೆದ 15 ವರ್ಷಗಳಿಂದ ಇಲ್ಲದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.
ಅಣ್ಣಪ್ಪ ಅವರ ಅಣ್ಣ ಮಂಜುನಾಥ ರುಕ್ಕು ನಾಯ್ಕ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ಮನೆಗೆ ಪಿಟ್ಟಿಂಗ್ ಸಹ ಮಾಡಕೊಡುವ ಮೂಲಕ ತಮ್ಮ ನೀಡಿದ ಮಾತನ್ನು ಅಣ್ಣ ನಡೆಸಿಕೊಟ್ಟು ಬಡ ಕುಟುಂಬಕ್ಕೆ ನೆರವಾಗಿದ್ದಾರೆ.
ಈ ಮೂಲಕ ತಮ್ಮನ ಜೊತೆಗೆ ಸಾಥ್ ನೀಡಿ ವಿದ್ಯುತ್ ಸಂಪರ್ಕ ನೀಡಿ ನೆರವಾದ ಮಂಜುನಾಥ ರುಕ್ಕು ನಾಯ್ಕ, ಹಾಗೂ ಪಂಚಾಯತ ನೂತನ ಸದಸ್ಯ ಅಣ್ಣಪ್ಪ ರುಕ್ಕು ನಾಯ್ಕ ಅವರಿಗೆ ಭವಾನಿ ಅಂಬಿಗ ಕುಟುಂಬದವರು ಧನ್ಯವಾದ ಸಲ್ಲಿಸಿದ್ದಾರೆ.
ಗಣೇಶ ಶೆಟ್ಟಿ,ದತ್ತಾತ್ರಯ ಅಂಬೀಗ,ಶ್ರೀಧರ ನಾಯ್ಕ,ಗಣೇಶ ಅಂಬೀಗ ,ಮಾದೇವ ಪಟಗಾರ,ವಾಸು ನಾಯ್ಕ,ಕಲ್ಪನಾ ನಾಯ್ಕ,ಮಹೇಶ ಆಚಾರಿ,ವಿಠ್ಠಲ ನಾಯ್ಕ, ಬೀರಪ್ಪ ಆಚಾರಿ,ಕೇಶವ ಪಟಗಾರ, ಮಂಜಪ್ಪ ಉಪಸ್ಥಿತರಿದ್ದರು.