ಕುಮಟಾ:ಮೊದಲನೆ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಕೆ ಭರದಿಂದ ಸಾಗಿತ್ತು. ಇಂದು ಕುಮಟಾದ ಕೂಜಳ್ಳಿ ಗ್ರಾಮ ಪಂಚಾಯತ ಚುನಾವಣೆಗೆ ವೀಣಾ ಸುರೇಶ ನಾಯ್ಕ ನಾಮಪತ್ರ ಸಲ್ಲಿಸಿದರು.
ಈ ಭಾರಿ ಕೂಜಳ್ಳಿಯ ವಾರ್ಡನಲ್ಲಿ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ.
ಜನರು ತನಗೆ ಆರ್ಶೀವಾದ ಮಾಡಿ ಗೆಲ್ಲಿಸಿದರೆ, ಗ್ರಾಮದ ರಸ್ತೆ, ಬೀದಿ ದೀಪ,ಸೇರಿದಂತೆ ಕೆಲವು ಭಾಗದಲ್ಲಿ ಜನವರಿ ತಿಂಗಳಿಂದ ನೀರಿನ ಅಭಾವ ಉಂಟಾಗುತ್ತದೆ, ಜನರು ಬೇರೆ ಕಡೆಯಿಂದ ನೀರಿನ ಸೌಲಭ್ಯಕ್ಕೆ ಅವಂಬಿತರಾಗಿದ್ದಾರೆ.ಇಂತಹ ಸಮಸ್ಯೆ ಶಾಶ್ವತವಾಗಿ ಪರಿಹಾರ ಮಾಡಲು ಶ್ರಮಿಸುತ್ತೇನೆ ನಮ್ಮ ಗ್ರಾಮದಲ್ಲಿ ಮುಖ್ಯವಾಗಿ ಕೃಷಿ ಕುಟುಂಬಗಳು ಹೆಚ್ಚಾಗಿದ್ದು ಜಾನುವಾರುಗಳು ಏನಾದರೂ ಕಾಯಿಲೆ ಬಂದರೆ ಪಶು ಆಸ್ಪತ್ರೆ ಇಲ್ಲ, ನಮಗೆ ನಮ್ಮ ಗ್ರಾಮದ ಜನರು ಆರ್ಶಿವಾದ ಮಾಡಿ ಗೆಲ್ಲಿಸಿದರೆ ಪಶು ಆಸ್ಪತ್ರೆ ನಮ್ಮ ಗ್ರಾಮದಲ್ಲಿ ತರಲು ಪ್ರಯತ್ನಿಸುತ್ತೇನೆ.
ಅಲ್ಲದೆ ಸರಕಾರದಿಂದ ಸಿಗುವಂತ ಸೌಲಭ್ಯಗಳು ಗ್ರಾಮದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವಂತೆ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ. ನಮ್ಮೂರಿನ ಜನರು ನನ್ನನ್ನು ಬೆಂಬಲಿಸುತ್ತಾರೆ ವಿಶ್ವಾಸವಿದೆ ಎಂದು ಅಭ್ಯರ್ಥಿ ವೀಣಾ ಸುರೇಶ ನಾಯ್ಕ ಹೇಳಿದರು.