ಕುಮಟ:ಮೊದಲ ಹಂತದಲ್ಲಿ ನಡೆಯವ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕುಮಟ ತಾಲೂಕಿನ ಬರ್ಗಿ ಗ್ರಾಮ ಪಂಚಾಯತನ ಈ ಹಿಂದಿನ ಅಧ್ಯಕ್ಷರಾಗಿದ್ದ ರಾಮ ಕೆ ಪಟಗಾರ ಬರ್ಗಿ ವಾರ್ಡ್ ನಂಬರ್ ಎರಡರಿಂದ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ರು.
ರಾಮ ಪಟಗಾರ ಸತತವಾಗಿ ಮೂರು ಬಾರಿ ಬರ್ಗಿ ಗ್ರಾಮ ಪಂಚಾಯತಕ್ಕೆ ವಾರ್ಡ್ ನಂಬರ್ 2ರಿಂದ ಆಯ್ಕೆ ಆಗುತ್ತಿದ್ದು,ಅವರು ಇದುವರೆಗೆ ಮೂರು ಬಾರಿ ಆಯ್ಕೆ ಆಗಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಅಲ್ಲಿಸಿದ್ದಾರೆ. ಇದೀಗ ನಾಲ್ಕನೆ ಅವಧಿಗೆ ಅವರು ಕಣಕ್ಕೆ ಇಳಿದಿದ್ದಾರೆ. ರಾಮ ಪಟಗಾರ ಯುವ ರಾಜಕಾರಣಿ ಆಗಿದ್ದು ಒಮ್ಮೆ ಎರಡುವರೆ ವರ್ಷ ಅಧ್ಹಕ್ಷರಾಗಿದ್ರೆ ಇನ್ನೊಂದು ಬಾರಿ ನಿರಂತರ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ,ರಸ್ತೆ ,ಕುಡಿಯುವ ನೀರು, ಸೇರಿದಂತೆ ಅನೇಕ ಜನಪರ ಕೆಲಸವನ್ನ ನಿರ್ವಹಿಸಿದ್ದಾರೆ. ಅವರ ಉತ್ತಮ ಆಡಳಿತವನ್ನ ಆ ಕ್ಷೇತ್ರದ ಮತದಾರರು ಅವರನ್ನ ನಿರಂತರವಾಗಿ ಆಯ್ಕೆ ಮಾಡುತ್ತಿದ್ದಾರೆ. ಈ ಭಾರಿ ಸಹ ಮತದಾರರು ಕೈ ಹಿಡಿಯಲಿದ್ದಾರೆ ಎನ್ನುವ ಬಗ್ಗೆ ರಾಮ ಪಟಗಾರ ವಿಶ್ವಾಸಹೊಂದಿದ್ದಾರೆ..