ಮೊದಲ ಹಂತದಲ್ಲಿ ನಡೆಯುವ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಕುಮಟಾ ತಾಲೂಕಿನ ಕೂಜಳ್ಳಿ ಗ್ರಾ.ಪಂ ಈ ಹಿಂದಿನ ಉಪಾದ್ಯಕ್ಷರು ಆದ ಪ್ರಕಾಶ ನಾಯ್ಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ವರ್ದಿಸಿ ಪಂಚಾಯತ ಸದ್ಯಸರಾಗಿ, ಉಪಾದ್ಯಕ್ಷರು ಆಗಿ ಗ್ರಾಮದಲ್ಲಿ ಮನೆಮಾತಾಗಿದ್ದಾರೆ. ಪ್ರಕಾಶ ನಾಯ್ಕ ತಮ್ಮ ಅವಧಿಯಲ್ಲಿ ಅನೇಕ ಜನಪರ ಕೆಲಸ ಕಾರ್ಯದ ಮೂಲಕ ಗ್ರಾಮದ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರ ಅವಧಿ ಯಲ್ಲಿ ಕೂಜಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ರಸ್ತೆ, ಗಟಾರ, ಬೀಧಿದೀಪ ಸೇರಿದಂತೆ ಅನೇಕ ಕೆಲಸ ಕಾರ್ಯದ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದ್ದರು. ಉತ್ತಮ ಕೆಲಸ ಕಾರ್ಯದ ಮೂಲಕ ಈ ಭಾಗದಲ್ಲಿ ಉತ್ತಮ ನಾಯಕತ್ವದ ಗುಣ ಹೊಂದಿರುವ ಪ್ರಕಾಶ ನಾಯ್ಕ ಈ ಭಾರಿ ಸಹ ಮತದಾರರು ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.