ಕುಮಟಾ: ಪುರಸಭೆ ಕಾರ್ಯಾಲಯದಲ್ಲಿರುವ ಮತ್ತು ಪುರಸಭೆಯ ಸಮುದಾಯ ಭವನದಲ್ಲಿರುವ ಗೃಹ ಲಕ್ಮೀ ನೊಂದಣಿ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡರಾದ ನಿವೇದಿತ್ ಆಳ್ವಾ ಭೇಟಿ ನೀಡಿದರು.
ಅಲ್ಲಿಯ ಸಿಬ್ಬಂದಿಗಳೊಂದಿಗೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು. ಅರ್ಜಿ ಸಲ್ಲಿಸಲು ಬಂದಿರುವ ಅರ್ಜಿದಾರರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಾತನಾಡಿದ ಅವರು ಸರಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಮೀ ಯೋಜನೆಯು ಮಹಿಳೆಯರಿಗೆ ಉಪಯುಕ್ತವಾದ ಯೋಜನೆಯಾಗಿದೆ. ಕಾಂಗ್ರೆಸ್ ಸರಕಾರವು ನುಡಿದಂತೆ ನಡೆದಿದೆ. ಜನರಿಗೆ ಅನುಕೂಲವಾಗುವ ಯೋಜನೆಯ ಕುರಿತಂತೆ ಜನತೆಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ, ಆದಷ್ಟು ಶೀಘ್ರ ನೊಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ್ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿ.ಎಲ್.ನಾಯ್ಕ್, ರವಿ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಜಾಫರ್ ಶೇಖ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾರತಿ ಪಟಗಾರ, ಕುಮಟಾ ನಗರ ಘಟಕದ ಅಧ್ಯಕ್ಷ ನಾಗರಾಜ್ ನಾಯ್ಕ್, ಪಕ್ಷದ ಮುಖಂಡರಾದ ಭುವನ್ ಭಾಗ್ವತ್,ಕೃಷ್ಣಾನಂದ ವರ್ನೇಕರ್ ,ಅಶೋಕ್ ಗೌಡ,ಶಂಕರ್ ಅಡಿಗುಂಡಿ ಸಚಿನ್ ನಾಯ್ಕ,ಪುರಸಭಾ ಸದಸ್ಯರು ಗಳಾದ್ ಎಂ ಟಿ ನಾಯ್ಕ್ , ಆಶಾ ನಾಯಕ್,ವಿನಯಾ ಜಾರ್ಜ್.ಮಹಿಳಾ ಕಾಂಗ್ರೆಸನ ವೀಣಾ ನಾಯಕ್ ,ತಾರಾ ಗೌಡ ,ದಾಕ್ಷಾಯಿಣಿ ಅರಿಗ ಕಾಂಗ್ರೆಸನ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.