ಕುಮಟಾ : ಶನಿವಾರ 4 ದಿನದ ಹಿಂದೆ ದೇವಿಮನೆ ಘಟ್ಟದ ತಗ್ಗಿನಲ್ಲಿ ಪತ್ತೆಯಾದ ಮಹಿಳೆಯ ಶವದ ಪ್ರಕರಣವನ್ನು ಬೇಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಕೊಲೆಯ ಪ್ರಕರಣವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮನೆಯವರೇ ಆದ ಮಹೇಶ, ಕಾವ್ಯ, ನೀಲಕ್ಕ, ಗೌರಮ್ಮ, ಅಮಿತ್ ಸೇರಿ ಐವರನ್ನು ಬಂಧಿಸಿದ್ದಾರೆ.
ಕೊಲೆಯಾದವಳು ಹಾವೇರಿಯ ಶಿಗ್ಗಾವಿಯ, ಚಿಕ್ಕಮಲ್ಲೂರಿನವಳಾದ (ಯಲ್ಲಮ್ಮ) ತನುಜಾ ಲೋಹಿತ್. (26) ತನುಜಾಳ ನಡತೆ ಸರಿಯಿಲ್ಲದ ಕಾರಣದಿಂದಾಗಿ ಕುತ್ತಿಗೆಗೆ ವೇಲ್ ನಿಂದ ಬಿಗಿದು ಅವಳ ಮನೆಯಲ್ಲಿಯೇ ಆರೋಪಿಗಳಾದ ಕುಟುಂಬಸ್ಥರು ಈ ಕೊಲೆ ಮಾಡಿ, ಶವವನ್ನು ತಂದು ಘಾಟ್ ನಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೊಲೆಯಾದ ಮಹಿಳೆಯ ನಡತೆ ಸರಿಹೋಗದ ಕಾರಣ ಮತ್ತು ಕೌಟುಂಬಿಕ ಕಲಹ ಮಹಿಳೆಯೋರ್ವಳ ಕೊಲೆಗೆ ಕಾರಣವಾಗಿದೆ. ಕೊಲೆಯಾದ ತನುಜಾಳ ಗಂಡನ ಅಣ್ಣ ಮಹೇಶ, ಚಿಕ್ಕಮ್ಮಂದಿರಾದ ಗೌರಮ್ಮ ಮತ್ತು ನೀಲಮ್ಮ ಕೊಲೆಗೆ ಸಂಚು ರೂಪಿಸಿ, ಈಗ ಪೊಲೀಸ್ ಅತಿಥಿಯಾಗಿದ್ದಾರೆ.
ಕೋಳಿ ಊಟ ಮಾಡಿಸಿ, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಲಾಗಿದೆ.ಮಹಿಳೆಯೋರ್ವಳ ನಡೆಯು ಸರಿ ಇಲ್ಲ ಎಂದು ಆಕೆಯ ಪತಿಯ ಅಣ್ಣನೇ ಸಂಚು ರೂಪಿಸಿ ಕೊಲೆಗೈದು ಹಾವೇರಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಶವವನ್ನು ತಂದು ಎಸೆದು ಪರಾರಿಯಾಗಿದ್ದರು. ಘಟನೆ ನಡೆದ 4 ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸರು ಪ್ರಕರಣವನ್ನು ಬೇದಿಸಿ, ಆರೋಪಿತರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಮಹಿಳೆ ತನುಜಾ ಈಕೆಯ ನಡತೆಯ ಕುರಿತಾಗಿ ಈಕೆಯ ಗಂಡ ಸೇರಿದಂತೆ ಕುಟುಂಬಸ್ಥರಿಗೆ ತೀರಾ ಬೇಸರವಿದ್ದು, ತನುಜಾಳ ಗಂಡನಾದ ಲೋಹಿತ್ ಅನುಮಾನಗೊಂಡಿದ್ದ. ಅಲ್ಲದೇ ತನುಜಾಳು ಅನೇಕರೊಟ್ಟಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎಂಬುದು ಮನೆಯವರ ಆರೋಪ.
ಕಾರವಾರ ಎಸ್.ಪಿ ವಿಷ್ಣುವರ್ಧನ್ ಎನ್, ಭಟ್ಕಳ ಉಪ ವಿಭಾಗದ ವಿಜಯಪ್ರಸಾದ್, ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ, ಪಿಎಸ್ಐ ಸಂಪತ್ ಕುಮಾರ್, ನವೀನ್ ನಾಯ್ಕ, ಸಿಬ್ಬಂದಿಗಳಾದ ಲೋಕೇಶ್, ದಯಾನಂದ ನಾಯ್ಕ, ಪ್ರದೀಪ, ಗುರು ನಾಯಕ್, ಮಹಿಳಾ ಸಿಬ್ಬಂದಿ ರೂಪಾ ನಾಯ್ಕ, ಮಹಾದೇವಿ ಗೌಡ ಇತರರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.