ಕುಮಟಾ: ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಡಾ ಎ ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಧಾರವಾಡದ ಜೆ ಎಸ್ ಎಸ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ' ಸಂಕಲ್ಪ ' ಯುವ ಉತ್ಸವದಲ್ಲಿ ಭಾಗವಹಿಸಿದ್ದಾರೆ.
ಅಲ್ಲಿ ಟ್ರೆಸರ್ ಹಂಟ್ ನಲ್ಲಿ ಬಿ.ಎಲ್.ಶ್ರಜನ್ ಹಾಗೂ ಸುಜಲ್ ಕವರಿ ದ್ವಿತೀಯ ಸ್ಥಾನ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿಯಲ್ಲಿ ದಾಮೋದರ್ ಹೆಗಡೆ ಹಾಗೂ ಶೋಬಿತ್ ಗೌಡ ದ್ವಿತೀಯ ಸ್ಥಾನ ಪಡೆಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ನೂರಕ್ಕೂ ಅಧಿಕ ಕಾಲೇಜುಗಳಲ್ಲಿ ಬಾಳಿಗಾ ಮಹಾವಿದ್ಯಾಲಯ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು ಕಾಲೇಜಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಗೌರವ ಸಲ್ಲಿಸಿದಂತಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್ ವಿ ಶೇಣ್ವಿ, ಕಾಲೇಜಿನ ಯೂನಿಯನ್ ಚೇರ್ಮನ್ ಡಾ.ಅರವಿಂದ ನಾಯಕ್, ದೈಹಿಕ ಶಿಕ್ಷಕರಾದ ಶ್ರೀನಿವಾಸ ಹರಿಕಾಂತ್,ಶಿಕ್ಷಕರಾದ ರಾಘು ನಾಯ್ಕ ಹಾಗೂ ವೆಲೆನ್ಸಿಯ ಡಿಸೋಜಾ ಮತ್ತು ಸಂಪೂರ್ಣ ಶಿಕ್ಷಕ ವೃಂದದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.