ಕುಮಟಾ: ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಗೋಕರ್ಣ ತದಡಿ ಮೂಲದ ಡಾ ಚೇತನ ನಾಐಕ ಅವರು ಎಂ.ಬಿ.ಬಿ.ಎಸ್ ನೀಟ್ ಪಿ.ಜಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ೬೩೬ ರ‍್ಯಾಂಕಗಳಿಸುವುದರ ಮೂಲಕ ಸಾಧನೆ ಮಾಡಿದ್ದಾರೆ. ಡಾ. ಚೇತನ ನಾಯ್ಕ ಇವರು ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡಿ, ಆ ನಂತರ ನೀಟ್ ಪಿ.ಜಿ ಪರೀಕ್ಷೆ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ೬೩೬ ನೇ ರ‍್ಯಾಂಕ್ ಪಡೆದು ಜಿಲ್ಲೆ ಹಾಗೂ ತಾಲೂಕಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ತಂದಿದ್ದಾರೆ.