Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಬಗ್ಗೆ ಬೂತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಕುಮಟಾ: ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಉನ್ನತ ಮಟ್ಟದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಕುರಿತು ಕೆಪಿಸಿಸಿ ಅಧ್ಯಕ್ಷರಾದ  ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಮಾನ್ಯ ಶ್ರೀ ಸಿದ್ದರಾಮಯ್ಯ  ಅವರು ಹಸ್ತಾಕ್ಷರವಿರುವ ಪತ್ರವನ್ನು ಬೂತ್ ಮಟ್ಟದಲ್ಲಿ ವಿತರಿಸುವ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಹಾಗೂ ಡಿಸಿಸಿ ನಿರ್ದೇಶನದಂತೆ  ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ  ಮಾಜಿ ಶಾಸಕಿಯರಾದ  ಶಾರದಾ ಮೋಹನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ವಿ.ಎಲ್.ನಾಯ್ಕ, ಇತರ ಮುಖಂಡರ ಹಾಗೂ ಕಾರ್ಯಕರ್ತರ ಉಪಸ್ಥಿತಿಯಲ್ಲಿ   ಕಾಂಗ್ರೇಸ್ ಪಕ್ಷದ  ಚುನಾವಣೆ ಪ್ರಣಾಳಿಕೆ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವ  ಉದ್ದೇಶದಿಂದ ಸಭೆಯನ್ನು ಆಯೋಜಿಸಲಾಗಿತ್ತು.



ಈ ವೇಳೆ ಮಾತನಾಡಿದ ಮಾಜಿ ಶಾಸಕಿಯರಾದ  ಶಾರದಾ ಮೋಹನ್ ಶೆಟ್ಟಿಯವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಅವರು , ನಮ್ಮ ಕಾಂಗ್ರೆಸ್ ಪಕ್ಷವು ಬಡವರ ಪರ ಕಾಳಜಿಯುಳ್ಳ ಪಕ್ಷವಾಗಿದ್ದು, ಬಿಜೆಪಿ ನೇತೃತ್ವದ ಸರ್ಕಾರದ ಬೃಷ್ಠಾಚಾರ ಹಾಗೂ ಬೆಲೆ ಏ ರಿಕೆಯಿಂದಾಗಿ ಜನಜೀವನ ದುಸ್ಥರವಾಗಿದೆ.  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ,ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ನೀಡುವ ಗೃಹಲಕ್ಷ್ಮಿ ಹಾಗೂ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.


ಈ ಯೋಜನೆಗಳನ್ನು  ಜಾರಿ, ಮಾಡುವ ಸಲುವಾಗಿ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಕೆಪಿಸಿಸಿ ಅಧ್ಯಕ್ಷರ ಹಾಗೂ ಮಾಜಿ ಮುಖ್ಯಮಂತ್ರಿಗಳ ಹಸ್ತಾಕ್ಷರವಿರುವ ಈ ಗ್ಯಾರಂಟಿ ಪತ್ರಗಳನ್ನು ಪ್ರತಿಯೊಂದು ಕುಟುಂಬಗಳಿಗೆ ಪಕ್ಷದ ಕಾರ್ಯಕರ್ತರು ತಲುಪಿಸಿ, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮವಹಿಸಬೇಕಾಗಿ ಕಾರ್ಯಕರ್ತರಿಗೆ ಕರೆ ನೀಡಿದರು.
    ಈ ಸಂದರ್ಭದಲ್ಲಿ ಮುಖಂಡರಾದ  ರತ್ನಾಕರ ನಾಯ್ಕ, ಶಿಮಧುಸೂಧನ್ ಶೇಟ್,  ಸುರೇಖಾ ವಾರೇಕರ್,  ಗಾಯತ್ರಿ ಗೌಡ,  ಶಂಕರ್ ಅಡಿಗುಂಡಿ,  ಮುಜಾಫರ್ ಸಾಬ್,  ಹನುಮಂತ ಪಟಗಾರ,   ಅರುಣ್ ಗೌಡ,  ಅಶೋಕ ಗೌಡ,  ಎಂ.ಟಿ.ನಾಯ್ಕ, ಚಂದ್ರಹಾಸ ನಾಯಕ,  ವೀಣಾ ನಾಯಕ,  ಗಜಾನನ ನಾಯ್ಕ,  ಶಶಿಕಾಂತ ನಾಯ್ಕ,  ಜಗದೀಶ್ ಹರಿಕಂತ್ರ,  ಫ್ರಾನ್ಸಿಸ್ ಫರ್ನಾಂಡಿಸ್,ಗಜಾನನ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಘಟಕಾಧ್ಯಕ್ಷರುಗಳು, ವಿವಿಧ. ಸೆಲ್ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತ್/ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿರಿಯ ಕಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.