ಕುಮಟಾ :ಹೊಸ ಹೆರವಟ್ಟಾದ ರೈಲ್ವೆ ಬ್ರಿಡ್ಜ್ ಹತ್ತಿರ ಟಿಪ್ಪರ್ ಬೈಕ್‌ಗೆ ಗುದ್ದಿದ ಪರಿಣಾಮ ಬೈಕ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಪಟ್ಟಣದ ಹೊಸ ಹೆರವಟ್ಟಾದ ರೈಲ್ವೆ ಬ್ರಿಡ್ಜ್ ಬಳಿ ಚಂದಾವರ ಕಡೆಯಿಂದ ಕುಮಟಾ ಬರುತ್ತಿದ್ದ ಟಿಪ್ಪರ ಒಂದು ಚಂದಾವರ ಕಡೆಗೆ ಹೊಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಹೊನ್ನಾವರದ ದೇವಿಕೇರಿ ನಿವಾಸಿ ನಿಲೇಶ ದತ್ತ ದೇಶಭಂಡಾರಿ (೨೫) ಮೃತಪಟ್ಟಿದ್ದಾನೆ. ಕೂಲಿ ಕೆಲಸಕ್ಕಾಗಿ ಕಡತೋಕಾಕ್ಕೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಕುಮಟಾ ಠಾಣೆ ಪೊಲೀಸರು ಶವವನ್ನು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.