Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕುಮಟಾದ ಪತ್ರಕರ್ತ ಅನ್ಸಾರ್ ಮೇಲೆ ಹಲ್ಲೆಗೆ ಯತ್ನ, ಆರೋಪಿ ವಿರುದ್ಧ ಕ್ರಮಕ್ಕೆ ಶಾಸಕರಿಗೆ ಮನವಿ

ಕುಮಟಾ: ವಿಜಯಕರ್ನಾಟಕ ಪತ್ರಿಕೆಯ ಕುಮಟಾ ವರದಿಗಾರ ಅನ್ಸಾರ ಶೇಖ್ ಅವರಿಗೆ ಅಪಘಾತ ಪಡಿಸಲು ಯತ್ನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕುಮಟಾ ತಾಲೂಕಿನ ಪತ್ರಕರ್ತರು ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.


ತಾಲೂಕಿನ ವಿಜಯಕರ್ನಾಟಕ ಪತ್ರಿಕೆಯ ವರದಿಗಾರಅನ್ಸಾರ ಶೇಖ್‍ಅವರು ಡಿ.31ರಂದು ತಮ್ಮ ಸ್ಕೂಟಿ ಮೇಲೆ ಚಂದಾವರದಿಂದಕುಮಟಾಕಡೆಗೆ ಸಾಗುತ್ತಿರುವಾಗ ಫಾರ್ಚೂನರ್‍ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಚಂದಾವರದ ಇಮಾಮ್‍ ಜೈನೊದ್ದಿನ್ ಘನಿ ಎಂಬಾತ ವಾಲಗಳ್ಳಿ ಘಟ್ಟದ ಬಳಿ ಸ್ಕೂಟರ್‍ಗೆಡಿಕ್ಕಿ ಹೊಡೆದು, ಅಪಘಾತ ಪಡಿಸಲು ಯತ್ನಿಸಿದ್ದಾನೆ. ಸ್ಕೂಟರ್‍ನ ಹಿಂಬದಿಯಿಂದ ವೇಗವಾಗಿ ಬಂದುಅಪಘಾತ ಪಡಿಸಿ ಕೊಲೆ ಮಾಡುವ ಭಯ ಹುಟ್ಟಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿತನ ವಿರುದ್ಧ ಈಗಾಗಲೇ ಪತ್ರಕರ್ತಅನ್ಸಾರ ಶೇಖ್‍ಅವರುಕುಮಟಾ ಪೊಲೀಸ್‍ಠಾಣೆಯಲ್ಲಿದೂರುಕೂಡ ದಾಖಲಿಸಿದ್ದಾರೆ.

ಅಲ್ಲದೇಆರೋಪಿತನು ಕ್ರಿಮಿನಲ್ ಮನಸ್ಥಿತಿಯಲ್ಲಿದ್ದು, 2017ರಲ್ಲಿ ಅನ್ಸಾರ್‍ಅವರ ಮೇಲೆ ಹಲ್ಲೆಗೆ ಯತ್ನಿಸಿದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಸಂಬಂಧ ಹೊನ್ನಾವರ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಆರೋಪಿತನ ವಿರುದ್ಧ ಹೊನ್ನಾವರ ಪೊಲೀಸ್‍ಠಾಣೆಯಲ್ಲೂ ಕೂಡ ಡಿ.29ರಂದು ಕೊಲೆ ಬೆದರಿಕೆ ಹಾಕಿದ ಬಗ್ಗೆ ಇನ್ನೊಂದು ಪ್ರಕರಣಕೂಡ ದಾಖಲಾಗಿದೆ. ಅಪರಾಧಿಕ ಮನಸ್ಥಿತಿಯಲ್ಲಿರುವ ಆರೋಪಿತನಿಂದ ಅನ್ಸಾರ್ ಅವರ ಜೀವಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇಂಥ ದುಷ್ಕøತ್ಯದಿಂದ ಪತ್ರಕರ್ತರಿಗೆ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗುವ ಸಾಧ್ಯತೆಅಧಿಕವಾಗಿದೆ. ಹಾಗಾಗಿ ಆರೋಪಿತಇಮಾಮ್‍ಜೈನೊದ್ದಿನ್ ಘನಿ ವಿರುದ್ಧಕಠಿಣ ಕಾನೂನು ಕ್ರಮಜರುಗಿಸುವಂತೆ ಪತ್ರಕರ್ತರು ನೀಡಿ ಮನವಿಯಲ್ಲಿಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿಅವರು, ಈ ಕೃತ್ಯವನ್ನು ಖಂಡಿಸಿದ್ದಾರೆ. ತಕ್ಷಣ ಸಿಪಿಐ ಶ್ರೀಧರ ಅವರಿಗೆಕರೆ ಮಾಡಿ, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೇ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಪತ್ರಕರ್ತರಿಗೆ ಭರವಸೆ ನೀಡಿದರು.

ಬಳಿಕ ಪತ್ರಕರ್ತರು ಕುಮಟಾ ಉಪವಿಭಾಗಾಧಿಕಾರಿಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್ ಅಶೋಕ ಭಟ್‍ಅವರ ಮೂಲಕ ಉಪವಿಭಾಗಾಧಿಕಾರಿರಾಹುಲ ರತ್ನಂ ಪಾಂಡೆಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಮಟಾತಾಲೂಕಿನ ಪತ್ರಕರ್ತರಾದ ಸುಬ್ರಾಯ ಭಟ್, ಎಂ ಜಿ ನಾಯ್ಕ, ಚರಣರಾಜ್ ನಾಯ್ಕ, ರಾಘವೇಂದ್ರ ದಿವಾಕರ, ಶಂಕರ ಶರ್ಮಾ, ಪ್ರವೀಣ ಹೆಗಡೆ, ಎಸ್‍ಎಸ್ ಹೆಗಡೆ, ನಾಗರಾಜ ಪಟಗಾರ, ನಟರಾಜ ಗದ್ದೆಮನೆ, ಮಂಜುನಾಥ ಈರಗೊಪ್ಪ, ವಿನಾಯಕ ಬ್ರಹ್ಮೂರ, ಸಂತೋಷ ನಾಯ್ಕ ಇತರರು ಇದ್ದರು.