ಕಾರವಾರ : ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ ಅವರು ಜಿಲ್ಲೆಯ ಹಲವು ಠಾಣೆಗಳ ಪಿಎಸ್‌ಐಗಳನ್ನ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಗಳ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಪಿಎಸ್‌ಐ ಆಗಿದ್ದ ಆನಂದ ಮೂರ್ತಿಯವರನ್ನು ಹೊನ್ನಾವರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದು,
ಹೊನ್ನಾವರ ಠಾಣೆ ಪಿಎಸ್‌ಐ ಆಗಿದ್ದ ಶಶಿಕುಮಾರ್ ಅವರನ್ನ ಹೊನ್ನಾವರ ಸಿಎಸ್‌ಪಿ ಠಾಣೆಗೆ, ಕಡೂರು ಠಾಣೆಯ ಪಿಎಸ್‌ಐ ಆಗಿದ್ದ ಪುಟ್ಟಸ್ವಾಮಿ ಎನ್ನುವವರನ್ನ ಕಾರವಾರ ಸಂಚಾರ ಠಾಣೆ ಪಿಎಸ್‌ಐ- 2 ಆಗಿ ವರ್ಗಾವಣೆ ಮಾಡಿದ್ದು, ಇನ್ನೂ ಗೋಕರ್ಣ ಠಾಣೆ ಪಿಎಸ್‌ಐ ಆಗಿದ್ದ ನವೀನ್ ನಾಯ್ಕರನ್ನ ಕುಮಟಾ ಠಾಣೆ ಪಿಎಸ್‌ಐ ಆಗಿ ನೇಮಕ ಮಾಡಲಾಗಿದೆ.
ಇನ್ನು ಹೊನ್ನಾವರ ಠಾಣೆಯಲ್ಲಿ ತನಿಖೆ ವಿಭಾಗದ ಪಿಎಸ್‌ಐ ಆಗಿದ್ದ ಮಹಾಂತೇಶ್ ನಾಯ್ಕರನ್ನ ಹೊನ್ನಾವರ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ, ದಾಂಡೇಲಿ ನಗರ ಠಾಣೆ ಪಿಎಸ್‌ಐ ಆಗಿದ್ದ ಕಿರಣ ಪಾಟೀಲ್ ಅವರನ್ನ ದಾಂಡೇಲಿ ನಗರ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಕ್ಕೆ, ದಾಂಡೇಲಿ ನಗರ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿದ್ದ ಯಲ್ಲಪ್ಪ ಎಸ್. ಅವರನ್ನ ದಾಂಡೇಲಿ ನಗರ ಠಾಣೆ ತನಿಖೆ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.