ಹೊನ್ನಾವರ : ತಾಲೂಕಿನ ಶ್ರೀ ಕ್ಷೇತ್ರ ಭಂಡೂರೇಶ್ವರಿ ದೇವಾಲಯದಲ್ಲಿ ಅಕ್ಟೋಬರ್ 16,17, 18ರಂದು 3 ದಿನಗಳ ಕಾಲ ನಡೆಯಬೇಕಿದ್ದ ಪುತ್ರಕಾಮಿಷ್ಠೆ ಮಹಾಯಾಗವನ್ನು ಅನಿರೀಕ್ಷಿತ ಮಳೆ ಕಾರಣದಿಂದ ರದ್ದು ಪಡಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಈ ಯಾಗದಲ್ಲಿ ಪಾಲ್ಗೊಳ್ಳಲಿರುವ ಭಕ್ತರಿಗೆ ಅನಾನುಕೂಲವಾಗಬಾರದೆಂದು ಈ ಯಾಗವನ್ನು ಮುಂದೂಡಲಾಗಿದ್ದು, ಇದೆ ಬರುವ 16,17,18 ಜನವರಿ 2026 ರಂದು ದೇವಾಲಯದಲ್ಲಿ ನಡೆಯಲಿರುವ ಜಾತ್ರೆಯದಿನದಂದು ಈ ಯಾಗವನ್ನು ಹಮ್ಮಿಕೊಳ್ಳಲಾಗುವುದು ಎಂದು ದೇವಾಲಯದ ಪ್ರಕಟಣೆಯಲ್ಲಿ ದೇವಾಲಯದ ದರ್ಮದರ್ಶಿಗಳಾದ ಪ್ರಶಾಂತ ಭಂಡೂರು ತಿಳಿಸಿದ್ದಾರೆ.