Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕುಮಟಾ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಮುಂದಾದ ಮುಖ್ಯಾಧಿಕಾರಿ ಮುಖ್ಯಾಧಿಕಾರಿ ವರ್ಗಾವಣೆ

ಕುಮಟಾ:- ಕುಮಟಾ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ. ಕೆ.ವರ್ಗಾವಣೆಯಾಗಿದ್ದು, ಪಟ್ಟಣದ ಮಾರುಕಟ್ಟೆ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದೇ ಇವರ ವರ್ಗಾವಣೆಗೆ ಕಾರಣವಾಯಿತ್ತೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು ಇಂದು ಕುಮಟಾದಲ್ಲಿ ಸಾರ್ವಜನಿಕರು ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಮನವಿ ನೀಡಿದ್ದಾರೆ.
ಕುಮಟಾ ತಾಲೂಕಿನ ಗ್ರಾಮೀಣ ಭಾಗಗಳ ಬಹುತೇಕ ರಸ್ತೆಗಳು ಅಭಿವೃದ್ಧಿ ಕಾಣುವ ಜೊತೆಗೆ ಅಗಲೀಕರಣವಾಗುತ್ತಿವೆ. ಆದರೆ ಪಟ್ಟಣದ ಮಾರ್ಕೇಟ್ ರಸ್ತೆಗಳ ಅಗಲೀಕರಣ ಮಾತ್ರ ಎರಡು ಮೂರು ದಶಕಗಳಿಂದಲೂ ಇದ್ದ ಸ್ಥಿತಿಯಲ್ಲಿದೆ.

ರಸ್ತೆ ಡಾಂಬರೀಕರಣವಾದರೂ ಅಗಲೀಕರಣ ಮಾತ್ರ ಸಾಧ್ಯವಾಗಿಲ್ಲ. ಹೀಗಾಗಿ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಿಸುವ ದುಃಸ್ಥಿತಿ ಸಾರ್ವಜನಿಕರನ್ನು ಕಾಡಿದೆ. ಪಟ್ಟಣದ ಕೋರ್ಟ್ ರಸ್ತೆಯಿಂದ ಬಸ್ತಿಪೇಟೆ, ಮೂರುಕಟ್ಟೆ ರಸ್ತೆ, ರಥ ಬೀದಿ, ಪಿಕ್ ಅಪ್ ಬಸ್
 ಸ್ಟಾಂಡ್‌ಗೆ ಹೋಗುವ ರಸ್ತೆಯಂತೂ ಯಾವಾಗಲೂ ಟ್ರಾಫಿಕ್ ಸಮಸ್ಯೆಯಿಂದ ಕೂಡಿರುತ್ತದೆ, ಬಸ್,ಲಾರಿಯಂತಹ ಬೃಹತ್ ವಾಹನಗಳು ಈ ರಸ್ತೆಯಲ್ಲಿ ಬಂದರೆ,ಟ್ರಾಫಿಕ್ ಸಮಸ್ಯೆಯಾಗಿ, ವಾಹನ ಸವಾರರು ಹೈರಾಣರಾಗುವ ದುಃಸ್ಥಿತಿ ಎದುರಾಗುತ್ತದೆ.

ಈ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕೊಡಲೆಂದ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಮಾರ್ಕೆಟ್‌ನ ಕಿರಿದಾದ ರಸ್ತೆಗಳ ಅಗಲೀಕರಣಕ್ಕೆ ಮುಂದಾಗಿದ್ದರು.
 ಕೋರ್ಟ್ ರಸ್ತೆಯಿಂದ ಬಸ್ಕಿಪೇಟೆ ಕ್ರಾಸ್‌ವರೆಗಿನ ರಸ್ತೆಯನ್ನು ಆಗಲೀಕರಣಗೊಳಿಸಲು ತೆರವು ಕಾರ್ಯಾಚರಣೆ ಕೂಡ ನಡೆಸಿದ್ದರು.ಬಸ್ಲಿಪೇಟೆ ಕ್ರಾಸ್‌ನಿಂದ ಮೂರುಕಟ್ಟೆ ಕ್ರಾಸ್‌ವರೆಗಿನ ರಸ್ತೆಯ ಅಗಲೀಕರಣಕ್ಕೆ ಕೂಡ ಕೈ ಹಾಕಿದ್ದರು. ಈ ಸಂಬಂಧ ಅಂಗಡಿಕಾರರು ಮತ್ತು ಮುಖ್ಯಾಧಿಕಾರಿಗಳ ನಡುವೆ ಸಾಕಷ್ಟು ಬಾರಿ ಮಾತಿನ ಚಕಮಕಿ ನಡೆದಿದೆ.ಯಾರ ಮಾತಿಗೂ ಜಗ್ಗದೆ, ಯಾವುದೇ ಒತ್ತಡಕ್ಕೂ ಮಣಿಯದ ಮುಖ್ಯಾಧಿಕಾರಿ, ರಸ್ತೆಯ ಅಗಲೀಕರಣ ಕಾರ್ಯಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಕೆಲ ಪ್ರಭಾವಿಗಳು ಮುಖ್ಯಾಧಿಕಾರಿಯನ್ನು ಇಲ್ಲಿಂದ ವರ್ಗಾಯಿಸುವ ತಂತ್ರ ರೂಪಿಸಿ, ಸ್ಥಳೀಯ ಶಾಸಕರ ಸಹಾಯದಿಂದ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಾಧಿಕಾರಿ ವರ್ಗಾವಣೆಯಾದ ಆದೇಶ ಪ್ರತಿ ಅವರಿಗೆ ಇ-ಮೇಲ್ ಮೂಲಕ ತಲುಪಿದ್ದು, ಶೀಘ್ರದಲ್ಲಿ ರಿಲೀವ್ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಇದೀಗ ಮುಖ್ಯಾಧಿಕಾರಿ ವರ್ಗಾವಣೆ ಸ್ಥಳೀಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರಮಾಣಿಕವಾಗಿ ಕೆಲಸ ಮಾಡುವವರಿಗೆ ವರ್ಗಾವಣೆ ಶಿಕ್ಷೆಯೇ ಎನ್ನುವ ಪ್ರಶ್ನೆ ಏಳುವಂತಾಗಿದೆ.