ಕುಮಟಾ: ಸಮೀಪದ ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯಾದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯು ಮಾರ್ಚ್-೨೦೨೪ರ ಎಸ್.ಎಸ್.ಎಲ್.ಸಿ. ವಾರ್ಷಿಕ ಮುಖ್ಯ ಪರೀಕ್ಷೆ-೧ರಲ್ಲಿ ೯೫.೨೪% ಫಲಿತಾಂಶವನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಕುಮಾರಿ ತೃಪ್ತಿ ಅನಂತ ದೇಶಭಂಡಾರಿ ಇವಳು ಶೇ. ೯೧.೨% ಫಲಿತಾಂಶವನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಕುಮಾರಿ ಸಾಧನಾ ನಾಗೇಶ ಗುನಗಾ ಇವಳು ಶೇ ೯೦.೦೮% ಫಲಿತಾಂಶವನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.
ಇನ್ನು ಕುಮಾರಿ ಸಂಜನಾ ನಂದ ನಾಯ್ಕ ಇವಳು ಶೇ ೮೬.೦೮% ಫಲಿತಾಂಶವನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾಳೆ. ಹಿಂದಿ ಮತ್ತು ಸಂಸ್ಕೃತ ಈ ವಿಷಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ವಿಷಯಗಳ ಒಟ್ಟಾರೆ ಫಲಿತಾಂಶವು ೧೦೦% ಆಗಿರುತ್ತದೆ. ೪ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೩೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಮತ್ತು ೧೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, ೦೯ ವಿದ್ಯಾರ್ಥಿಗಳು ಉತ್ತೀರ್ಣತಾ ಶ್ರೇಣಿಯಲ್ಲಿ ತೇರ್ಗಡೆಯಾಗಿ, ಶಾಲೆಗೆ ಕೀರ್ತಿ ತಂದಿರುತ್ತಾರೆ. ಈ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾರಾಯಣ ಮಲ್ಲಾಪುರ ಹಾಗೂ ಸದಸ್ಯರುಗಳು, ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಹಾಗೂ ಪ್ರೌಢ ಶಾಲಾ ಮುಖ್ಯಾಧ್ಯಾಪಕಿಯವರಾದ ವಿಜಯಲಕ್ಷ್ಮೀ ಜಿ. ಭಟ್ಟ ಹಾಗೂ ಶಾಲೆಯ ಶೈಕ್ಷಣಿಕ ಸಲಹೆಗಾರರಾದ
ಎಂ. ಟಿ. ಗೌಡ ಇವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿರುತ್ತಾರೆ.